ಮರಿಯಮ್ಮನಹಳ್ಳಿ:ಕೊರೋನಾ ಮಹಾರೋಗವು ಮಹಾಯುದ್ಧಗಳಿಗಿಂತ ಕ್ರೂರಿ,ಕ್ರೂರಿ ರೋಗದ ವಿರುದ್ಧ ಹೋರಾಡಲು ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಪ.ಪಂ.ಅಧ್ಯಕ್ಷೆ ಬಿ.ಎಂ.ಎಸ್.ಕಾಂತಲತಾ ಪ್ರಕಾಶ ಕರೆನೀಡಿದರು.ಅವರು ಪಟ್ಟಣದ ಒಂಭತ್ತನೆವಾರ್ಡಿನ ವಾಲ್ಮೀಕಿ ಸಮುದಾಯ ಭವನದಲ್ಲಿ, ಕೂಡ್ಲಗಿಯ ಸ್ನೇಹಸಂಸ್ಥೆಯಿಂದ ದಮನಿತ ಮಹಿಳೆಯರು ಹಾಗು ಕಿಶೋರಿಯರಿಗೆ ಆಹಾರಸಾಮಾಗ್ರಿಗಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿಕೊಂಡು ಮಾತನಾಡಿದರು.ಪಟ್ಟಣದ ಪಿ.ಎಸ್.ಐ.ಹನುಮಂತಪ್ಪ ತಳವಾರ ಕಾರ್ಯಕ್ರಮ ಉದ್ಘಾಟಿಸಿದರು. ಟಿ.ರಾಮಾಂಜನೇಯ ಸ್ನೇಹಸಂಸ್ಥೆ ನಿರ್ದೇಶರು,ಕೆ.ಪಿ.ಜಯ ಸಂಸ್ಥೆಯ ಸಹನಿರ್ದೇಶಕರು.ಶಿಕ್ಷಕ ಆರ್.ಬಿ. ಕೊಟಿಗಿ,ಸಂಸ್ಥೆಯ ಜಿ.ಪಾರ್ವತಿ,ಜಿ.ರೇಣುಕಾ,ಚಿನ್ನಾಪ್ರಪಮ್ಮ,ನೇತ್ರಾವತಿ, ಅಶ್ವನಿ,ಸುಜಾತ,ಕೊಟ್ರೇಶ ಇತರರಿದ್ದರು.