ಜನನ ಮತ್ತು ಮರಣ ಪ್ರಮಾಣಕ್ಕೆ ಡಿಜಿಟಲ್ ಸಹಿ ಕಡ್ಡಾಯ

0
199

ಕೊಪ್ಪಳ: ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಇನ್ನುಮುಂದೆ ಇ-ಜನ್ಮ ಪೋರ್ಟಲ್‌ನಲ್ಲಿ ಡಿಜಿಟಲ್ ಸಹಿ ಮೂಲಕ ಗ್ರಾಮ ಲೆಕ್ಕಾಧಿಕಾರಿಗಳು, ವೈದ್ಯಾಧಿಕಾರಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ನೀಡಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಅಂಕಿ-ಸAಖ್ಯೆಗಳ ಸಂಗ್ರಹಣಾ ಇಲಾಖೆಯ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಜನನ ಮತ್ತು ಮರಣ ಹಾಗೂ ೭ನೇ ಆರ್ಥಿಕ ಗಣತಿಯ ಪ್ರಗತಿ ಕುರಿತು ನಡೆದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲ ಗ್ರಾಮ ಲೆಕ್ಕಿಗರು, ವೈದ್ಯಾಧಿಕಾರಿಗಳು ಹಾಗೂ ನಗರಸಭೆ ಪೌರಾಯುಕ್ತರು ಕಡ್ಡಾಯವಾಗಿ ಇ-ಜನ್ಮ ತಂತ್ರಾAಶದ ಪೋರ್ಟಲ್‌ನಲ್ಲಿ ದಾಖಲಿಸಲು ಡಿಜಿಟಲ್ ಸಹಿ (ಡಿಎಸ್‌ಸಿ)ಯನ್ನು ಅಳವಡಿಸಿಕೊಳ್ಳಬೇಕು. ಇನ್ನುಮುಂದೆ ಕಾರ್ಯನಿರ್ವಹಣೆಯನ್ನು ಇ-ಜನ್ಮ ಡಿಜಿಟಲ್ ಸಹಿ(ಡಿಎಸ್‌ಸಿ) ಮೂಲಕವೇ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಂಬAಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮ ಲೆಕ್ಕಾಧಿಕಾರಿಗಳು, ವೈದ್ಯಾಧಿಕಾರಿಗಳು ಹಾಗೂ ನಗರಸಭೆ ಪೌರಾಯುಕ್ತರಿಂದ ಪ್ರತ್ಯೇಕವಾಗಿ ಅಂಕಿ-ಸAಖ್ಯೆಗಳನ್ನು ಸಂಗ್ರಹಿಸಬೇಕು. ಬಳಿಕ ಪರಿಹಾರ ಪೋರ್ಟಲ್ ಮತ್ತು ಇ-ತಂತ್ರಾAಶ ಪೋರ್ಟಲ್‌ಗಳಲ್ಲಿ ದಾಖಲಾದ ಮಾಹಿತಿಯನ್ನು ಸಂಗ್ರಹಿಸಬೇಕು. ಇವುಗಳ ನಡುವಿನ ವ್ಯಾತ್ಯಾಸವನ್ನು ಗಮನಿಸಿ, ಎಲ್ಲವನ್ನೂ ಮರುಹೊಂದಾಣಿಕೆ ಮಾಡುವುದರ ಮೂಲಕ ಮರಣ ಸಂಖ್ಯೆಗಳನ್ನು ಖಚಿತ ಪಡಿಸಿಕೊಳ್ಳಬೇಕು ಎಂದರು.

Previous article“ವಿದ್ಯುತ್ ವ್ಯತ್ಯಯ: ಜನತೆಗೆ ತಾಪಾತ್ರಯ.”
Next articleಕೊಟ್ಟೂರು ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ತೋಟದ ರಾಮಣ್ಣ

LEAVE A REPLY

Please enter your comment!
Please enter your name here