8.3 C
New York
Tuesday, March 28, 2023

Buy now

spot_img

ಅದ್ದೂರಿಯಾಗಿ ಜರುಗಿದ  ಗಾಣಗಟ್ಟೆ ಶ್ರೀ ಮಾಯಮ್ಮ ರಥೋತ್ಸವ3ಲಕ್ಷಕ್ಕೆ ಹರಾಜಾದ ದೇವಿ ಪಟಾಕ್ಷಿ

ಬೆಳಗಾಯಿತುವಾರ್ತೆ
ಕೊಟ್ಟೂರು: ತಾಲೂಕಿನ ಗಾಣಗಟ್ಟೆ ಗ್ರಾಮದ ಆದಿಶಕ್ತಿ ಶ್ರೀ ಮಾಯಮ್ಮ ದೇವಿ ರಥೋತ್ಸವವು ಸಕಲ ವಾದ್ಯ ಮೇಳಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ಬುಧವಾರ ಸಂಜೆ ಅದ್ದೂರಿಯಾಗಿ ಜರುಗಿತು. ರಥೋತ್ಸವಕ್ಕೂ ಮೊದಲು ಶ್ರೀ ಮಾಯಮ್ಮ ದೇವಿಗೆ ಬೇವಿನ ಎಲೆಯ ಜೊತೆಗೆ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನವನ್ನು ಮೂರು ಸುತ್ತು ಪ್ರದಕ್ಷಿಣೆ ಮಾಡಿದ ನಂತರ ಶ್ರೀದೇವಿಯ ಪಟಾಕ್ಷಿ ಹರಾಜು ಪ್ರಕ್ರಿಯೆ ನಡೆಯಿತು.
ಕೊಟ್ಟೂರು ತಾಲೂಕು  ಗಾಣಗಟ್ಟೆ ಗ್ರಾಮದ ತಳವಾರ  ಓಬಳೇಶ್  ಅವರಿಗೆ  ₹  3,10,101 ಲಕ್ಷ  ರೂಪಾಯಿಗೆ 2023 ರ ಈ ವರ್ಷದ ಮಾಯಮ್ಮ ದೇವಿಯ ಪಟಾಕ್ಷಿಯನ್ನು ಪಡೆದುಕೊಂಡರು.
ನಂತರ ರಥೋತ್ಸವಕ್ಕೆ ಚಾಲನೆ ದೊರಕಿತು. ತೇರು ಏರುವ ಸಮಯದಲ್ಲಿ ನೆರೆದಿದ್ದ ಸಹಸ್ರಾರು ಭಕ್ತರು ಜಯಘೋಷ ಕೂಗುತ್ತಿದ್ದಂತೆ ಆಯಗಾರ ಬಳಗವು ಭಕ್ತರು ತೇರನ್ನು ಕೈಯಿಂದ ತಳ್ಳುವ ಮೂಲಕ ಚಾಲನೆಗೊಂಡಿತು. ಶ್ರೀದೇವಿಯ ಭಕ್ತರು ಬಾಳೆಹಣ್ಣು, ಹೂವು  ದವನ ರಥಕ್ಕೆ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ವರದಿ: ಕೊಟ್ರೇಶ ತೆಗ್ಗಿನಕೇರಿ

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,749FollowersFollow
0SubscribersSubscribe
- Advertisement -spot_img

Latest Articles