ಟೋಕಿಯೋ– ಟೋಕಿಯೋ ಒಲಿಂಪಿಕ್ಸ್ ನ ಉದ್ಘಾಟನಾ ದಿನದಂದು ಬಿಲ್ಲುಗಾರಿಕೆಯ ಮಹಿಳೆಯರ ವೈಯಕ್ತಿಕ ಶ್ರೇಯಾಂಕ ಸುತ್ತಿನಲ್ಲಿ ಸ್ಪರ್ಧೆಯಲ್ಲಿ ಭಾರತದ ದೀಪಿಕಾ ಕುಮಾರಿ 9ನೇ ಸ್ಥಾನ ಪಡೆದಿದ್ದಾರೆ.
ಅಗತ್ಯ 720 ಅಂಕಗಳ ಪೈಕಿ ದೀಪಿಕಾ ಕುಮಾರಿ 663 ಅಂಕವನ್ನು ಪಡೆದರು. ದೀಪಿಕಾ ಕುಮಾರಿ ಇದೀಗ ಮೊದಲ ನಿರ್ಗಮನ ಸುತ್ತಿನಲ್ಲಿ ಭೂತಾನ್ ನ ಭು ಕರ್ಮ ಅವರೊಂದಿಗೆ ಸ್ಪರ್ಧಿಸಲಿದ್ದಾರೆ. ರಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡಿದ್ದ ಕರ್ಮ ಅವರು ವಿಶ್ವ ಶ್ರೇಯಾಂಕದಲ್ಲಿ 193ನೇ ಸ್ಥಾನದಲ್ಲಿದ್ದಾರೆ
ಪರುಷರ ವಿಭಾಗದಲ್ಲಿ ಭಾರತದ ಅತನುದಾಸ್, ತರುಣ್ ದೀಪ್ ರೈ ಮತ್ತು ಪ್ರವೀಣ್ ಜಾದವ್ ಅವರು ಮುಂದಿನ ಶ್ರೇಯಾಂಕ ಸುತ್ತಿನಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ.