ಬೆಳಗಾಯಿತು ವಾರ್ತೆ
ಬಳ್ಳಾರಿ: ಕಳೆದ ಎರಡು ದಿನದ ಹಿಂದೆ ಮಹದೇವಪುರ ಗ್ರಾ.ಪ, ಎನ್ ಗೌರಿಪುರ ಗ್ರಾಮದ ಉಮಾಪತಿ(25) ಎಂಬ ಯುವಕ ಬಳ್ಳಾರಿಯ ಚಾನಲ್ ನಲ್ಲಿ ಈಜಾಡಲು ಹೋಗಿ ನಾಪತ್ತೆಯಾಗಿದ್ದ ಪ್ರಕರಣ ದಾಖಲಾಗಿತ್ತು.
ಮಂಗಳವಾರ ಯುವಕನ ಶವ ಎತ್ತಿನ ಭೂದಿಹಾಳು ಗ್ರಾಮದ ಹತ್ತಿರ ಪತ್ತೆಯಾಗಿದ್ದು, ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ಮಾಡಿದರು.
ನಂತರ ಮೃತನ ಕುಟುಂಬಕ್ಕೆ 2 ಲಕ್ಷ ಪರಿಹಾರ ನೀಡಿ, ಸರ್ಕಾರದಿಂದ ಬರುವ ಸವಲತ್ತುಗಳು ಸಿಗುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಚಿವರು ಆಪ್ತ ಸಹಾಯಕರ ಪಾಪೇಶ್ ನಾಯಕ, ನಾಯಕನಹಟ್ಟಿ ಮಂಡಲ ಅಧ್ಯಕ್ಷರಾದ ಈ ರಾಮರೆಡ್ಡಿ, ಮಂಡಲ ಪ್ರಧಾನ ಕಾರ್ಯದರ್ಶಿ ಮಲ್ಲೇಶ್, ಕಾರ್ಯದರ್ಶಿಗಳಾದ ಎಚ್ ವಿ ಪ್ರಕಾಶ್ ರೆಡ್ಡಿ, ಎಸ್ ನಾಗರಾಜ್, ಮಂಜುನಾಥ ಹಾಗೂ ಕುಟುಂಬಸ್ಥರು ಇದ್ದರು.