ಬೆಂಗಳೂರು: ಆರ್ ಟಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಂಡೀಗಡ ಜಿಎಸ್ಟಿ ಮಂಡಳಿ ಸಭೆಯಲ್ಲಿ ಹಲವು ವಿಚಾರಗಳ ಚರ್ಚೆ ಮಾಡಲಾಗಿದೆ. ಕಾನೂನಿನ ತೊಡಕುಗಳನ್ನು ನಿವಾರಣೆ ಮಾಡಲು ಬಹುತೇಕ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯಗಳಿಗೆ ಜಿಎಸ್ಟಿ ಪರಿಹಾರದ ಅವಧಿ ವಿಸ್ತರಣೆ ಬಗ್ಗೆ ಚರ್ಚೆ ಆಗಿದೆ. ಆಗಸ್ಟ್ ತಿಂಗಳಲ್ಲಿ ಇದರ ಬಗ್ಗೆ ತಿಳಿಸೋದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ ಎಂದು ಹೇಳಿದರು.
ಉದಯಪುರದಲ್ಲಿ ಆಗಿರುವುದು ಅಮಾನವೀಯ ಮತ್ತು ಹೇಯ ಕೃತ್ಯ. ಭಯೋತ್ಮಾದಕತೆ ಕೃತ್ಯ ಇದು ಅಪರಾಧಿಗಳನ್ನು ಗಲ್ಲಿಗೇರಿಸಬೇಕು, ಅಪರಾಧಿಗಳ ಹಿಂದೆ ಇರುವರೆಲ್ಲ ಯಾರು? ಯಾವ ಸಂಘಟನೆ ಇದೆ ಅಂತ ಬಯಲಿಗೆ ಬರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.