ಬಳ್ಳಾರಿ: ನಗರದ ರಾಯಲ್ ಪೋರ್ಟ್ ನಲ್ಲಿ ಕರ್ನಾಟಕ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ ಹಾಗೂ ಅಗ್ರಿಣಿಯ ಬ್ಯಾಂಕ್ ಬಳ್ಳಾರಿ ಜಿಲ್ಲೆ ಕೆನರಾ ಬ್ಯಾಂಕ್ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಗ್ರಾಹಕರ ಸಂಪರ್ಕ ಕಾರ್ಯಕ್ರಮವನ್ನು ಬುಧವಾರ ಹಮ್ಮಿಗೊಳ್ಳಲಾಗಿತ್ತು ಈ ಕಾರ್ಯಕ್ರವನ್ನು ನಗರ ಶಾಸಕ ಜಿ ಸೋಮಶೇಖರ್ ರೆಡ್ಡಿ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶಾದ್ಯಂತ ಬಡವರಿಗೆ ಸೇರಿದಂತೆ ಇನ್ನಿತರರಿಗೆ ಸಾಲ ಸೌಲಭ್ಯ ಸೇರಿದಂತೆ ವಿಮೆ ಸೌಲಭ್ಯವನ್ನು ಕೂಡ ಪ್ರಧಾನಮಂತ್ರಿಯವರು ಜಾರಿ ಮಾಡಿದ್ದಾರೆ ಸರ್ಕಾರ ನೀಡುತ್ತಿರುವ ಎಲ್ಲಾ ಸೌಲಭ್ಯಗಳನ್ನು ಎಲ್ಲಾ ಗ್ರಾಹಕರು ವಿಮೆ ಸೌಲಭ್ಯ ಮತ್ತು ಸಾಲ ಸೌಲಭ್ಯ ಪಡೆದು ಸದುಪಯೋಗ ಪಡೆದುಕೊಂಡು ಮರುಪಾವತಿ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೊಟ್. ಕೆನಾರ ಬ್ಯಾಂಕ್ ಎಜಿಎಂ ಮೋಹನ್ ಕುಮಾರ್, ಆರ್ ಬಿಐ ಎಜಿಎಂ ಬಿಸ್ವಾಸ್ ಕೆಜಿಬಿ ಜಿಎಂ ನಿಂಗೇ ಗೌಡ, ನರ್ಬಾಡ್ ಡಿಡಿಎಂ ಯುವರಾಜ್ ಕುಮಾರ್ ಸೇರಿದಂತೆ ಇತರರು ಇದ್ದರು