ಬಳ್ಳಾರಿ : ನಗರದ ಸಂಜಯ್ ಗಾಂಧಿ ಪಾಲಿಟೆಕ್ನಿಕ್ ಕಾಲೇಜಿನ ವತಿಯಿಂದ ಶನಿವಾರ ಆರೋಗ್ಯ ಇಲಾಖೆ ಸಹಕಾರದೊಂದಿಗೆ 18ವರ್ಷ ಮೇಲ್ಪಟ್ಟ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ಕೋವಿಡ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಉಚಿತ ಕೋವಿಡ್ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ
ಸಂಜಯ್ ಗಾಂಧಿ ಪಾಲಿಟೆಕ್ನಿಕ್ ಕಾಲೇಜಿನ ನಿರ್ದೇಶಕಿ ನಮ್ರತಾ ಅವರು ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಬಳ್ಳಾರಿ ಬೆಳಗಾಯಿತು ಪತ್ರಿಕೆಯೊಂದಿಗೆ ಮಾತನಾಡಿದ ಸಂಜಯ್ ಗಾಂಧಿ ಕಾಲೇಜಿನ ಪ್ರಾಂಶುಪಾಲರಾದ ಗೌರಿ ಶಂಕರ್ ಹಿರೇಮಠ್ ಅವರು ಕಾಲೇಜಿನಲ್ಲಿ ಸುಮಾರು ಆರು ನೂರಕ್ಕೂ ಹೆಚ್ಚಿನ ವಿದ್ಯಾರ್ಥಿ ಗಳಿಗೆ ಇಂದು ಊಚಿತ ಕೋವಿಡ್ ಲಸಿಕೆಯನ್ನು ಹಾಕಿಸಲಾಗುತ್ತಿದೆ ಅಲ್ಲದೇ ಕಾಲೇಜಿನ
ಕಾಲೇಜಿನ ಪ್ರಾದ್ಯಪಕರಿಗೂ ಮತ್ತು ಸಿಬ್ಬಂದಿಗಳಿಗೆ ವಿದ್ಯಾರ್ಥಿಗಳ ಪೋಷಕರಿಗೂ ಸಹ ವ್ಯಾಕ್ಸಿನ್ ಹಾಕಿಸಲಾಗುತ್ತದೆ. ಎಲ್ಲಾರೂ ಕೋವಿಡ್ ಲಸಿಕೆ ಹಾಕಿ ಕೊಳ್ಳುವ ಮೂಲಕ ಕೋವಿಡ್ ನೊಂದಿಗೆ ಹೋರಾಡಲು ನಾವು ಸನ್ನದ್ಧರಾಗಬೇಕಿದೆ ಎಂದರು.
ಕಾಲೇಜಿನಲ್ಲಿ ಟಾಸ್ಕ್ ಫೋರ್ಸ್ ಸಮಿತಿ
ಸಂಜಯ್ ಗಾಂಧಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಟಾಸ್ಕ್ ಫೋರ್ಸ್ ಸಮಿತಿ ತಂಡ ನಿಯೋಜಿಸಲಾಗಿದೆ ಈ ತಂಡ ವಿದ್ಯಾರ್ಥಿಗಳಿಗೆ ಎಸ್.ಎಂ.ಎಸ್ ಪಾಲನೆ ಜೊತೆ ಕೋವಿಡ್ ಕುರಿತು ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಡಾಕ್ಟರ್, ನರ್ಸ್ , ಡಾಟ ಎಂಟ್ರಿ ಆಪರೇಟರ್ ಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮೆಕಾನಿಕಲ್ ಎಚ್ ಒಡಿ, ಅಂಬ್ರೇಶ್, ಎಲೆಕ್ರಟಿಕಲ್, ಎಚ್ ಒಡಿ, ಫಕ್ರುದ್ಧಿನ್,ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನೀಯರಿಂಗ್,ಎಚ್ ಒಡಿ, ಜಾಫರ್ ಮೋಹಿನುಧ್ಧಿನ್, ಮೆಟ್ ಲರ್ಜಿ,ಎಚ್,ಒಡಿ ರಾಮಾಂಜಿನೇಯಲು, ಸಿವಿಲ್ ಎಚ್ ಒಡಿ, ಶೃತಿ, ಲ್ಯಾಬ್ ಇನ್ ಸ್ಟ್ರಕ್ಟರ್ ಶಂಕರ್ ಸೇರಿದಂತೆ ಇತರರು ಇದ್ದರು.