ಆಸ್ಪತ್ರೆಗೆ ದಾಖಲಾಗುವ ಕೋವಿಡ್ ಸೋಂಕಿತರಲ್ಲಿ ಹೆಚ್ಚಿನವರು ಇನ್ನಿತರೆ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ..

    0
    181

    ಕೋವಿಡ್-19 ಕುರಿತಾಗಿ ದಿನಕ್ಕೊಂದು ಸ್ಪೋಟಕ ಮಾಹಿತಿ ಹೊರಬೀಳುತ್ತಲೇ ಇರುತ್ತದೆ. ಒಂದಿನ ‘ಕೋವಿಡ್-19’ ರೂಪಾಂತರದ ಬಗ್ಗೆಯಾದರೆ, ಮತ್ತೊಂದು ದಿನ ಇದನ್ನು ತಡೆಗಟ್ಟುವ ಲಸಿಕೆ ಬಗ್ಗೆ. ಈ ಸಾಂಕ್ರಾಮಿಕ ಖಾಯಿಲೆ ದೇಶಕ್ಕೆ ಲಗ್ಗೆ ಇಟ್ಟಾಗಿನಿಂದ ಒಂದಲ್ಲ ಒಂದು ರೀತಿಯ ಬದಲಾವಣೆಗಳನ್ನು, ಮಾರ್ಪಾಡುಗಳನ್ನು ಹೊರತರುತ್ತಿದೆ. ಇದೀಗ ಕೇಳಿಬರುತ್ತಿರುವ ಸುದ್ದಿಯೇನೆಂದರೆ, ಆಸ್ಪತ್ರೆಗೆ ದಾಖಲಾಗುವ ಕೋವಿಡ್ ಸೋಂಕಿತರಲ್ಲಿ ಹೆಚ್ಚಿನವರು ಇನ್ನಿತರೆ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಅಂದರೆ, ಕೋವಿಡ್-19 ಸೋಂಕಿಗೆ ಒಳಗಾದ ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳು, ಆಸ್ಪತ್ರೆಯಿಂದ ಹಿಂದಿರುಗುವಾಗ, ಮತ್ತೊಂದು ಆರೋಗ್ಯ ಸಮಸ್ಯೆಗಳೊದಿಗೆ ಹಿಂದಿರುಗುತ್ತಿದ್ದಾರೆ.
    ಈ ಕುರಿತು ಲಂಡನ್ ಮೂಲದ ವಿಜ್ಞಾನಿಗಳು ಸಂಶೋಧನೆಯನ್ನು ನಡೆಸಿದ್ದು, ಅವರು ಹೇಳುವ ಪ್ರಕಾರ, ಆಸ್ಪತ್ರೆಗೆ ದಾಖಲಾಗುವ ಕೋವಿಡ್-19 ಸೋಂಕಿತರು, ಸೋಂಕಿನಿAದ ಹೆಚ್ಚಿನವರು ಚೇತರಿಸಿಕೊಂಡ ಬಳಿಕ ಇನ್ನಿತರೆ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಪ್ರತಿ ಇಬ್ಬರು ಸೋಂಕಿತರಲ್ಲಿ ಒಬ್ಬರಿಗೆ ಈ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ.

    Previous articleಮಾರ್ಕೆಟ್‌ನಲ್ಲಿ ಸಾರ್ವಜನಿಕರಿಗೆ ಕೋವಿಡ್-19 ಲಸಿಕೆ
    Next articleಸಕಲ ಸಿದ್ದತೆಯಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 32 ವಿದ್ಯಾರ್ಥಿಗಳ ಗೈರು

    LEAVE A REPLY

    Please enter your comment!
    Please enter your name here