ಭಾರತದಲ್ಲಿ 62 ಲಕ್ಷಕ್ಕೂ ಅಧಿಕ ಕೋವಿಡ್-19 ಲಸಿಕೆಯ ಡೋಸ್‌ಗಳನ್ನು ವಿತರಣೆ ಮಾಡಲಾಗಿದೆ: ಕೇಂದ್ರ ಸರ್ಕಾರ

  0
  166

  ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕಳೆದ ಎರಡು ವಾರಗಳ ಕೋವಿಡ್-19 ಲಸಿಕಾ ವಿತರಣಾ ಅಭಿಯಾನದ ಕುರಿತಾದ ದತ್ತಾಂಶವನ್ನು ಪ್ರಕಟಮಾಡಿದೆ. ಅದರ ಅನುಸಾರ, ಭಾರತದಲ್ಲಿ ಇಲ್ಲಿಯವರೆಗೆ 62 ಲಕ್ಷಕ್ಕೂ ಅಧಿಕ ಕೋವಿಡ್-19 ಲಸಿಕೆಯ ಡೋಸ್‌ಗಳನ್ನು ಭಾರತದ 32 ಕೋಟಿಗೂ ಅಧಿಕ ಜನರಿಗೆ ನೀಡಲಾಗಿದೆೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಭಾರತದ ಒಟ್ಟು ಜನಸಂಖ್ಯೆ 137 ಕೋಟಿ. ಲಸಿಕೆ ಪಡೆಯಲು ಅರ್ಹರಿರುವಲ್ಲಿ ಇಲ್ಲಿಯವರೆಗೆ ಸರಿಸುಮಾರು ಶೇಕಡ 11.8ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಉಳಿದ ಜನರು ಇನ್ನು ಸಹ ಲಸಿಕೆಗಾಗಿ ಪರದಾಡುತ್ತಿದ್ದಾರೆ. ಕೋವಿಡ್-19 ಎರಡನೆ ಅಲೆ ತಾರಕಕ್ಕೇರುತ್ತಿರುವ ಈ ಸಮಯದಲ್ಲಿ ಇನ್ನು ಬಹುತೇಕ ಜನರು ಲಸಿಕೆ ಪಡೆದಿಲ್ಲವೆಂಬುದೇ ಖೇದಕರ ವಿಷಯ. ಆರಂಭದಲ್ಲಿ ಬಿರುಸಾಗಿ ಸಾಗಿದ ಲಸಿಕೆ ವಿತರಣಾ ಕಾರ್ಯಕ್ರಮವು ಕಾಲಕ್ರಮೇಣ ತನ್ನ ವೇಗವನ್ನು ಕಳೆದುಕೊಳ್ಳುತ್ತಾ ಬಂತು. ಇತ್ತ ಕೋವಿಡ್-19 ಎರಡನೆ ಅಲೆಯ ಅಟ್ಟಹಾಸವು ಹೆಚ್ಚಾಗತೊಡಗಿತು. ಇಲ್ಲಿಯವರೆಗೆ ಭಾರತದಲ್ಲಿ 2,83,248 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಇದರ ಶೇಕಡ 32ರಷ್ಟು ಸಾವಿನ ಪ್ರಕರಣವು ಕಳೆದ ಒಂದು ತಿಂಗಳಲ್ಲಿಯೇ ಸಂಭವಿಸಿದೆ. ಇದರಿಂದಾಗಿ ದೇಶದಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳಲ್ಲಿ ಇಳಿಕೆ ಕಂಡುಬAದರೂ ಸಹ ಸಾವಿನ ಪ್ರಕರಣಗಳು ಮಾತ್ರ ಏರುತ್ತಲೇ ಇದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ. “ಏಪ್ರಿಲ್ ಒಳಗಾಗಿ ಭಾರತದ ಎಲ್ಲಾ ದೇಶವಾಸಿಗಳು ಲಸಿಕೆ ಪಡೆದಿದ್ದರೆ, ಕೋವಿಡ್-19ನಿಂದಾಗಿ ಸಾವನ್ನಪ್ಪುವವರ ಸಂಖ್ಯೆ ಈ ರೀತಿಯ ಏರಿಕೆ ಕಂಡುಕೊಳ್ಳುತ್ತಿರಲಿಲ್ಲ. ಕೋವಿಡ್-19 ಎರಡÀನೇ ಅಲೆ ದೇಶದಲ್ಲಿ ಬಿರುಸಾಗಿ ಸಾಗುವುದಕ್ಕೆ ಇದೇ ಮುಖ್ಯ ಕಾರಣವೆಂದು (ಲಸಿಕೆ ಪಡೆಯದಿರುವುದೇ)” ಎಂದು ಈಗಾಗಲೆ ಹಲವಾರು ಆರೋಗ್ಯ ತಜ್ಞರು ಹೇಳಿದ್ದಾರೆ.

  Previous articleಗೃಹ ರಕ್ಷಕದಳದ ವಾಗೀಶ್ ಪೂಜಾರ್‌ಗೆ ಮುಖ್ಯಮಂತ್ರಿ ಪದಕ ಪ್ರಧಾನ.
  Next articleಕ್ಲಬ್ ಹೌಸ್ ಎಂಬ ಮಾಯೆಯೊಳಗೆ

  LEAVE A REPLY

  Please enter your comment!
  Please enter your name here