ನವದೆಹಲಿ: ಭಾರತದಲ್ಲಿ ದೈನಂದಿನ ಕೊರೊನಾವೈರಸ್ ಪ್ರಕರಣಗಳಲ್ಲಿ ಹೆಚ್ಚಳ ಕಂಡಿದ್ದು, ೧೮,೦೦೦ ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದರಿಂದ ೪,೩೪,೫೨,೧೬೪ ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅAಶಗಳು ತಿಳಿಸಿವೆ.
ಸಕ್ರಿಯ ಪ್ರಕರಣಗಳು ೧೨೨ ದಿನಗಳ ನಂತರ ಮತ್ತೆ ಒಂದು ಲಕ್ಷದ ಗಡಿ ದಾಟಿದೆ. ೨೪ ಗಂಟೆಗಳ ಅವಧಿಯಲ್ಲಿ ಒಟ್ಟು ೧೮,೮೧೯ ಹೊಸ ಕೋವಿಡ್ -೧೯ ಪ್ರಕರಣಗಳು ವರದಿಯಾಗಿದ್ದು, ೩೯ ಹೊಸ ಸಾವುಗಳೊಂದಿಗೆ ಸಾವಿನ ಸಂಖ್ಯೆ ೫,೨೫,೧೧೬ ಕ್ಕೆ ಏರಿದೆ. ಒಟ್ಟು ಸೋಂಕುಗಳ ಶೇಕಡಾ ೦.೨೪ ರಷ್ಟು ಸಕ್ರಿಯ ಪ್ರಕರಣಗಳು ೧,೦೪,೫೫೫ಕ್ಕೆ ಏರಿದೆ, ಆದರೆ ರಾಷ್ಟಿçÃಯ ಅಔಗಿIಆ-೧೯ ಚೇತರಿಕೆ ದರವು ೯೮.೫೫ ರಷ್ಟು ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಸಚಿವಾಲಯದ ಪ್ರಕಾರ ದೈನಂದಿನ ಪಾಸಿಟಿವಿಟಿ ದರವು ೪.೧೬ ಶೇಕಡಾ ಮತ್ತು ಸಾಪ್ತಾಹಿಕ ಪಾಸಿಟಿವಿಟಿ ದರವು ೩.೭೨ ಶೇಕಡಾದಲ್ಲಿ ದಾಖಲಾಗಿದೆ.