ನವದೆಹಲಿ – ದೇಶದಲ್ಲಿ, ವಿಶ್ವದಲ್ಲಿ ಕೊರೋನ ಮೂರನೇ ಅಲೆಆರಂಭಾಗಿದೆಯೇ? ಈಗಾಗಲೇ ಮೂರನೇ ಅಲೆ ಆರಂಭವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕರು ಹೇಳಿದ್ದರೆ, ದೇಶದಲ್ಲಿ , ಮೂರನೇ ಕೊರೋನ ಅಲೆ ಆಗಸ್ಟ್ ಅಂತ್ಯದ ವೇಳೆಗೆ ಆರಂಭವಾಗಲಿದೆ,ಮೇಲಾಗಿ ಮೂರನೆಯ ಹಿಂದಿನ ಅಲೆ ಗಿಂತಲೂ ಸೌಮ್ಯ ವಾಗಿರಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಆರೋಗ್ಯ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ ಮೂರನೇ ಕೊರೋನ ಅಲೆ ಆಗಸ್ಟ್ ಅಂತ್ಯದ ವೇಳೆಗೆ ಕಾಡುವ ಸಾಧ್ಯತೆಯಿದೆ ದಟ್ಟವಾಗಿದೆ ಎಂದು ಐಸಿಎಂಆರ್ ಪರಿಣಿತರು ಹೇಳುತ್ತಾರೆ.