ಬಳ್ಳಾರಿ: ಮಹಾನಗರ ಪಾಲಿಕೆ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಮಾಜಿ ಸಚಿವರಾದ ಯುಟಿ ಖಾದರ್ ಮತ್ತು ಜಿಲ್ಲೆಯ ಮುಖಂಡರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ದಿವಾಕರ್ ಬಾಬು, ಮತ್ತು ಮಾಜಿ ಶಾಸಕ ಸೂರ್ಯ ನಾರಯಣ ರೆಡ್ಡಿ ಅಲಭ್ಯ.
ನಗರದ ನಕ್ಷತ್ರ ಹೋಟಲ್‍ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಲ್ಲಂ ವೀರಭದ್ರಪ್ಪ ನವರು ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿನ ಕೊರತೆ ಇದೆ ಎಂದು ಪದೇ ಪದೇ ಮಾಧ್ಯಮದವರ ಕೇಳುತ್ತಾರೆ ಅದಕ್ಕಾಗಿ ಎಲ್ಲಾರೂ ಒಗ್ಗಟ್ಟಾಗಿದ್ದೇವೆ ಎಂದು ತೋರಿಸಲು ಎಲ್ಲಾ ಕಾಂಗ್ರೆಸ್ ಮುಖಂಡರನ್ನು ಒಂದೇ ವೇದಿಕೆಯಲ್ಲಿ ಸೇರಿಸಲಾಗಿದೆ ಎಂದರು.
ಬಾಬು ಊರಲ್ಲಿ ಇಲ್ಲ.. ರೆಡ್ಡಿ ಕೊನೆಗೂ ಬರಲೇ ಇಲ್ಲ….
ಮಾಜಿ ಸಚಿವ ದಿವಾಕರ್ ಬಾಬು ಮತ್ತು ಮಾಜಿ ಶಾಸಕ ಸೂರ್ಯ ನಾರಯಣ ರೆಡ್ಡಿ ಅವರು ಏಕೆ ಪತ್ರಿಕಾಗೋಷ್ಠಿಗೆ ಏಕೆ ಬಂದಿಲ್ಲ …? ಎಂಬ ಮಾಧ್ಯಮದವರ ಪ್ರಶ್ನೇಗೆ …ನಿಮ್ಮ ಪ್ರಶ್ನೇ ಸರಿ ಇದೇ… ದಿವಾಕರ್ ಬಾಬು ಅವರು ಊರಲ್ಲಿ ಇಲ್ಲ… ಬೇರೆ ಊರಿಗೆ ಹೋಗಿದ್ದಾರೆ… ಆದರೆ ಮಾಜಿ ಶಾಸಕರಾದ ಸುರ್ಯ ನಾರಯಣ ರೆಡ್ಡಿ ಅವರು ಸ್ವಲ್ಪ ಹೊತ್ತಿನಲ್ಲೇ ಪತ್ರಿಕಾಗೋಷ್ಠಿಗೆ ಬರುತ್ತಾರೆ ನೀವೂ ಬಂದಿಲ್ಲ ಅಂತ ಪತ್ರಿಕೆಯಲ್ಲಿ ಬರೆಯಬೇಡಿ ಎಂದು ಹಾಸ್ಯ ಚಟಾಕಿ ಹಾರಿಸಿದರು. ಆದರೆ ಪತ್ರಿಕಾಗೋಷ್ಠಿಗೆ ಮಾಜಿ ಶಾಸಕ ಸೂರ್ಯ ನಾರಯಣ ರೆಡ್ಡಿ ಅವರು ಕೊನೆಗೂ ಬರೆಲೇ ಇಲ್ಲ.
ಈ ಸಂದರ್ಭದಲ್ಲಿ ಎಲ್. ಹನುಮಂತಯ್ಯ, ನಾಸೀರ್ ಹುಸೇನ್, ಕೆಸಿ ಕೊಂಡಯ್ಯ, ಉಗ್ರಪ್ಪ, ನಾಗೇಂದ್ರ,ಯುಟಿ ಖಾದರ್, ಅಲ್ಲಂ ವೀರಭದ್ರಪ್ಪ, ನಾಸೀರ್ ಹುಸೇನ್, ಅನಿಲ್ ನಾಯ್ಡು, ಕಮಲಾ ಮರಿಸ್ವಾಮಿ, ಅಂಜಿನೇಯಲು ಇತರರು ಇದ್ದರು.