ಬಳ್ಳಾರಿ:ನಗರದ ಸುಧಾ ಕ್ರಾಸ್ ನಲ್ಲಿರುವ ಪೆಟ್ರೋಲ್ ಬಂಕ್ ಮುಂದೆ ಕಾಂಗ್ರೆಸ್ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ರಫೀಕ್ ಅವರ ನೇತೃತ್ವದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ರಫೀಕ್ ಮಾತನಾಡಿ
ಕೆಪಿಸಿಸಿ ಅಧಕ್ಷ ಆದೇಶದ ಮೇರೆಗೆ ಜಿಲ್ಲಾದ್ಯಂತ ಪ್ರತಿ ಪೆಟ್ರೋಲ್ ಬಂಕ್ ಮುಂದೆ ಹೋರಾಟ ಮಾಡಿ ಆ ಮೂಲಕ ಜನರಿಗೆ ಕೇಂದ್ರ ರಾಜ್ಯ ಸರ್ಕಾರದ ತಪ್ಪುಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
ಈ ಹಿಂದೆ ತೈಲ ಬೆಲೆ ಹೆಚ್ಚಾಗಿದ್ದಾಗ ಬೀದಿಗೆ ಬಂದ ಹೋರಾಟ ಮಾಡಿದ ಬಿಜೆಪಿ ಮುಖಂಡರು ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ ಅವರು ಕರೋನಾ ಸಮಯದಲ್ಲಿ ಜನರು ಬದುಕು ನಡೆಸುವುದೇ ಕಷ್ಟವಾಗಿದೆ ಈ ಸಮಯದಲ್ಲಿ ತೈಲ ಬೆಲೆ ಹೆಚ್ಚಿಸಿ ಜನರನ್ನು ಲೋಟಿ ಮಾಡಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು…..
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಂಖಡರಾದ ಕಲ್ಲುಕಂಬ ಪಂಪಾಪತಿ, ಮುಂಡ್ರಗಿ ನಾಗರಾಜ್, ಎಲ್. ಮಾರೆಣ್ಣ, ವಿಕ್ಕಿ, ಇತರರು ಇದ್ದರು