-0.8 C
New York
Thursday, March 30, 2023

Buy now

spot_img

ಸವದತ್ತಿ ಯಲ್ಲಮ್ಮ ದೇವಸ್ಥಾನವನ್ನು ಅಭಿವೃದ್ಧಿಗೈಯ್ಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿಂತನೆ

ಬೆAಗಳೂರು: ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನವನ್ನು ಅಂದಾಜು ೨೬ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೈಯ್ಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿಂತನೆ ನಡೆಸಿದ್ದು, ಈ ಕುರಿತು ಸಭೆ ನಡೆಸಿದರು.

ವಿಧಾನಸೌಧದ ಮುಖ್ಯಮಂತ್ರಿಗಳ ಕೊಠಡಿಯಲ್ಲಿ ಸವದತ್ತಿ ಶಾಸಕ ಆನಂದ್ ಮಾಮನಿ, ದೇವಸ್ಥಾನದ ಆಡಳಿತ ಮಂಡಳಿ ಜೊತೆ ಸಭೆ ನಡೆಸಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ವರದಿ ಸಿದ್ದಪಡಿಸುವಂತೆ ಸೂಚಿಸಿದರು. ದೇವಸ್ಥಾನದಲ್ಲಿ ವಸತಿ ನಿರ್ಮಾಣ ಸೇರಿದಂತೆ ಸೂಚಿಸಿದ ಅವರು, ವಾಸ್ತವ್ಯಕ್ಕೆ ೪೦೦ ಕೊಠಡಿಗಳಿದ್ದು,ಇನ್ನೂ ೨೦೦ ಕೊಠಡಿ ಹೆಚ್ಚಿಸಬೇಕು. ವಸತಿ ಸಮುದಾಯದಗಳ ಕೆಳಗೆ ಅನ್ನದಾಸೋಹ ಕೇಂದ್ರ ತೆರೆಯಬೇಕು. ೧,೨೦,೦೦೦ ಸ್‌ಕ್ವೇರ್ ಫೀಟ್ ನಲ್ಲಿ ವಸತಿ ಸಮುಚ್ಚಯ, ಸ್ನಾನಗೃಹ, ಶೌಚ ಗೃಹ ನಿರ್ಮಾಣ, ದೇವಸ್ಥಾನದಲ್ಲಿ ೨ ಪ್ರತ್ಯೇಕ ಸರತಿ ಸಾಲು, ಒಂದು ವಿಶೇಷ ದರ್ಶನಕ್ಕೆ ಸರತಿ ಸಾಲಿಗೆ ಅವಕಾಶ ನೀಡಬೇಕು. ದೇವಸ್ಥಾನದ ಸುತ್ತಲಿನ ೩ ಜಾಗಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ, ಫುಟ್‌ಪಾತ್ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ಸೂಚನೆ ನೀಡಿದ್ದಾರೆ. ವ್ಯಾಪಾರಸ್ಥರಿಗೆ ಪ್ರತ್ಯೇಕ ಅಂಗಡಿ ಮುಂಗಟ್ಟುಗಳಿಗೆ ಸ್ಥಳಾವಕಾಶ, ದೇವಸ್ಥಾನದ ಸ್ವಚ್ಚತೆಗೆ ಗುತ್ತಿಗೆ ಆಧಾರದಲ್ಲಿ ಕಾರ್ಮಿಕರ ನೇಮಕ ಮಾಡಬೇಕು ಎಂದು ಹೇಳಿದ ಅವರು, ಸವದತ್ತಿ ಶಾಸಕ ಆನಂದ್ ಮಾಮನಿ ನೇತೃತ್ವದಲ್ಲಿ ಜುಲೈ ೨೦ ರಂದು ಮತ್ತೊಂದು ಸಭೆ ನಡೆಸಿ ಅಂತಿಮ ವರದಿ ಸಲ್ಲಿಸುವಂತೆ ಹೇಳಿದರು.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,754FollowersFollow
0SubscribersSubscribe
- Advertisement -spot_img

Latest Articles