ಇಂದು ಪ್ರತಿಯೊಂದನ್ನು ಪಡೆಯಲು,ಗಳಿಸಲು, ನೋಡಲು, ಕೇಳಲು, ಕಾರ್ಯನಿರ್ವಹಿಸಲು, ಬದುಕಿನ ದಿನನಿತ್ಯದಲ್ಲಿ ಹಾಸುಹೊಕ್ಕಾಗಿ ಮನುಷ್ಯ ಸಂಬಂಧವನ್ನು ಹತ್ತಿರವಾಗಿಸುತ್ತಾ, ದೂರವಾಗಿಸುತ್ತಾ, ತನ್ನ ಕಂಧಬಾಹುವನ್ನು ಚಾಚುತ್ತಾ ಇಡೀ ವಿಶ್ವವೇ ಡಿಜಿಟಲ್ ತಂತ್ರಜ್ಞಾನದ ಮಾಯೆಗೆ ಮಾರು ಹೋಗುವಂತೆ, ತಂತ್ರಜ್ಞಾನವಿಲ್ಲದ ಜೀವನವೇ ಇಲ್ಲವೇನು ಎಂಬಷ್ಟರ ಮಟ್ಟಿಗೆ ನಮ್ಮಲ್ಲರನ್ನು ಅವರಿಸಿದೆ,ಹಾಗದರೆ ಈ ಡಿಜಿಟಲ್ ಯುಗದ ಸೋಷಿಯಲ್ ಮೀಡಿಯಾ ಗಳ ಬಗ್ಗೆ ಏನು ಗೊತ್ತಿಲ್ಲದೆ ಬದುಕ ಬಹುದೇ ಎಂದು ಕೇಳಿದರೆ ಖಂಡಿತವಾಗಿ ಜೀವಿಸ ಬಹುದು, ಆದರೆ ನಾವು ಅದನ್ನು ಅಗತ್ಯಕ್ಕೆ ತಕ್ಕಂತೆ ಬಳಸುವ ಬದಲು ಅದುವೇ ಜೀವನ ಸೋಷಿಯಲ್ ಮೀಡಿಯಾ ಇಲ್ಲದೇ ಇರುವವರು ನಾಗರಿಕರೇ ಅಲ್ಲ ಎಂಬ ಹಂತಕ್ಕೆ ಬಂದುಬಿಟ್ಟಿದ್ದಾರೆ, ಇಷ್ಟೆಲ್ಲಾ ಪೀಠಿಕೆ ಹಾಕಲು ಕಾರಣ ಇತ್ತೀಚಿನ ದಿನಗಳಲ್ಲಿ
ಸೋಷಿಯಲ್ ಮೀಡಿಯಾ ಆ್ಯಪ್ ಗಳಲ್ಲಿ ವಿಶಿಷ್ಟ ವಾಗಿರುವ ಹೆಚ್ಚು ಜನಪ್ರಿಯವಾಗುತ್ತಿರುವ ಕ್ಲಬ್ ಹೌಸ್ ಫೇಸ್ ಬುಕ್, ಇನ್ ಸ್ಟಾಗ್ರಾಂ, ಟ್ವಿಟ್ಟರ್ ನಂತಹ ಸಾಮಾಜಿಕ ಜಾಲತಾಣಗಳಿಗೆ ತೀವ್ರ ಪೈಪೋಟಿ ನೀಡುತ್ತಿರುವ ಈ ಮೂಲಕ ಹೆಚ್ಚು ಸುದ್ದಿಯಾಗುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚಿನ ಬಳಕೆದಾರರನ್ನು ಹೊಂದುತ್ತಿರುವ ಕ್ಲಬ್ ಹೌಸ್ ಆ್ಯಪ್ ವಿಭಿನ್ನ ರೀತಿಯ ಸಾಮಾಜಿಕ ಜಾಲತಾಣವಾಗಿದೆ.
ಈ ಹಿಂದೆ ಕೇವಲ ಫೋಟೊ, ವಿಡಿಯೋ, ಮೆಸೇಜ್ ಗಳ ಮೂಲಕ ಸಂಪರ್ಕಿಸಲು ಹಲವು ಸಾಮಾಜಿಕ ಜಾಲತಾಣಗಳಿದ್ದವು, ಆದರೆ ಲೈವ್ ಆಗಿ ಸಾವಿರಕ್ಕೂ ಹೆಚ್ಚು ಜನರು ವಾಯ್ಸ್ ಚಾಟ್ ನಡೆಸಲು ಯಾವುದೇ ಆ್ಯಪ್ ಗಳಿರಲಿಲ್ಲ, ಈಗ ಬಂದಿರುವ ಕ್ಲಬ್ ಹೌಸ್ ಆ್ಯಪ್ ನಲ್ಲಿ ನಾವು ಬಳಸುವ ಇನ್ನಿತರೆ ಸಾಮಾಜಿಕ ಜಾಲತಾಣಗಳಂತೆ ಪೋಸ್ಟ್ ಹಾಗೂ ಟೈಪ್ ಮಾಡಲು ಯಾವುದೇ ಆಯ್ಕೆಗಳಿಲ್ಲ, ಬದಲಾಗಿ ವಾಯ್ಸ್ ಚಾಟ್ ಮುಖಾಂತರ ಮಾತನಾಡಬಹುದು.ಇದರಲ್ಲಿರುವ ಡ್ರಾಪ್ ಇನ್ ಆಡಿಯೋ ಎನ್ನುವ ಸಾಲು ಹೆಚ್ಚು ಕ್ರಿಯೇಟಿವ್ ಆಗಿದೆ.