ಬಳ್ಳಾರಿ: ರಾಜ್ಯದ ಕಲ್ಯಾಣ ಮಂಡಳಿಯಲ್ಲಿ ಹತ್ತು ಸಾವಿರ ಹಣ ಕೋಟಿ ಸೆಸ್ ಹಣ ಸಂಗ್ರಹ ವಾಗಿದ್ದರೂ ಕಲ್ಯಾಣ ಮಂಡಳಿಯಿಂದ ಕಟ್ಟಡ ಕಾರ್ಮಿಕರಿಗೆ ಕೇವಲ ಮೂರು ಸಾವಿರ ರೂಪಾಯಿ ನೆರವು ಪ್ರಕಟಿಸಲಾಯಿತು ಅದೂ ಸಹ ಜಿಲ್ಲೆಯಲ್ಲಿನ ಯಾವ ಕಾರ್ಮಿಕರಿಗೆ ತಲುಪಿಲ್ಲ ಎಂದು ಸಿಐಟಿಯುಸಿಯ ಜಿಲ್ಲಾ ಕಾರ್ಯದರ್ಶಿಗಳಾದ ಜೆ.ಸತ್ಯಬಾಬು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪತ್ರಿಕಾಭವನದಲ್ಲಿ ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೋವಿಡ್ ಪರಿಹಾರ ಹತ್ತು ಸಾವಿರ ರೂಪಾಯಿ ಹಾಗೂ ಮನೆ ನಿರ್ಮಾಣಕ್ಕೆ ಸಹಾಯ ಧನ , ಸಂಪೂರ್ಣ ವೇಧ್ಯಕೀಯ ವೆಚ್ಚ ಪಾವತಿ ಹಾಗೂ ಬಾಕಿ ಸೌಲಭ್ಯಗಳ ವಿಲೇವಾರಿ ಮುಂತಾದ ಬೇಡಿಕೆ ಗಳನ್ನು ಮುಂದಿಟ್ಟುಕೊಂಡು ರಾಜ್ಯದಾದ್ಯಂತ ಜುಲೈ 12ರಂದು ಸಮನ್ವಯ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಾಗೂ ಬೆಂಗಳೂರಿನ ಕಲ್ಯಾಣ ಮಂಡಳಿ ಮುಂದೆ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ವತಿಯಿಂದ ಪ್ರತಿ ಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಎ.ದೇವದಾಸ್, ಇತರರು ಇದ್ದರು.