ಚಿತ್ರದುರ್ಗ: ಜಪಾನಿನ ಟೋಕಿಯೋದಲ್ಲಿ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ದೇಶದ ಕ್ರೀಡಾಪಟುಗಳಿಗೆ ಗುರುವಾರ ಜಿಲ್ಲಾಡಳಿತದ ವತಿಯಿಂದ ಶುಭ ಹಾರೈಸಲಾಯಿತು.ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಜಪಾನಿನ ಟೋಕಿಯೋದಲ್ಲಿ ಇದೇ ಜುಲೈ 23ರಿಂದ ಒಲಿಂಪಿಕ್ಸ್ ಕ್ರೀಡಾಕೂಟಗಳು ಪ್ರಾರಂಭವಾಗಲಿವೆ. ದೇಶದ ಶ್ರೇಷ್ಟ ಕ್ರೀಡಾಪಟುಗಳು ಇದರಲ್ಲಿ ಪಾಲ್ಗೊಳ್ಳಲಿದ್ದು, ಇವರೆಲ್ಲರಿಗೂ ಶುಭ ಹಾರೈಕೆಗಳು ಎಂದು ಶುಭಾಶಯ ತಿಳಿಸಿದರು.