-0.8 C
New York
Thursday, March 30, 2023

Buy now

spot_img

ಕಾಳಸಂತೆಯಲಿ ಮೆಣಸಿನಕಾಯಿ ಬೀಜ ಮಾರಾಟ ಆರೋಪ…ಎರಡು ಕಂಪನಿಗಳ ವಿರುದ್ಧ ದೂರು ದಾಖಲು

ಬಳ್ಳಾರಿ: ಕಾಳಸಂತೆಯಲಿ ಮೆಣಸಿನಕಾಯಿ ಬೀಜ ಮಾರಾಟ ಮಾಡುತ್ತಿರುವ ಆರೋಪದ ಹಿನ್ನಲೆಯಲ್ಲಿ ಕೃಷಿ ಇಲಾಖೆ ಹಾಗೂ ತೋಟ ಗಾರಿಕೆ ಅಧಿಕಾರಿಗಳು ಗಣಿನಗರಿ ಬಳ್ಳಾರಿಯ 41 ಬೀಜ ಮಾರಾಟ ಮಳಿಗೆಗಳಿಗೆ ದಿಢೀರನೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಹಾಗೂ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಸ್‌.ಬಿ.ಬೋಗಿಯವರ ನೇತೃತ್ವದ ಸಿಬ್ಬಂದಿ ಬೀಜ ಮಾರಾಟ ಕೇಂದ್ರದ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಎರಡು ಅಗ್ರೋ ಟ್ರೇಡಿಂಗ್ ಕಂಪನಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಬಳ್ಳಾರಿಯ ಬಾಲಾಜಿ ರಸ್ತೆಯಲ್ಲಿರುವ ಗವಿಸಿದ್ದೇಶ್ವರ ಆಗ್ರೋ ಟ್ರೇಡರ್ಸ್ ನ ಮಳಿಗೆಗೆ ಈ ಅಧಿಕಾರ ವರ್ಗ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಕೀಟನಾಶಕ ಪರವಾನಗಿ ಅವಧಿ ಮುಕ್ತಾಯ ವಾಗಿದ್ದು. ನವೀಕರಣ ಮಾಡಿಕೊಳ್ಳದೇ ಇರೋದು ಕಂಡುಬಂದಿದೆ. ಈ ಮಳಿಗೆ ಯಲ್ಲಿರುವ ಕೀಟನಾಶಕ ಪರಿಕರಗಳನ್ನಜಪ್ತಿ ಮಾಡಿದ್ದಾರೆ. ಮತ್ತು ಕೀಟನಾಶಕ ಕಾಯಿದೆ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲು ಕ್ರಮಕೈಗೊಂಡಿದ್ದಾರೆ.
ಇದಲ್ಲದೇ, ಬಳ್ಳಾರಿಯ ಏಕದಂತ ಟ್ರೇಡಿಂಗ್ ಕಂಪನಿ ಮಳಿಗೆಯಲ್ಲಿ ರಸಗೊಬ್ಬರವಲ್ಲದ ಪರಿಕರವನ್ನು ರಸಗೊಬ್ಬವೆಂದು ಮಾರಾಟ ಮಾಡುತ್ತಿರೋದು ಕಂಡುಬಂದ ಹಿನ್ನಲೆಯಲ್ಲಿ ಆ ಪರಿಕರವನ್ನ ಜಪ್ತಿಗೊಳಿಸಿ, ಮಾರಾಟ ಗಾರರ ವಿರುದ್ಧ ರಸಗೊಬ್ಬರ ಕಾಯಿದೆ ಅಡಿಯಲ್ಲಿ ಸೂಕ್ತ ಕಾನೂನು ರಿತ್ಯಾ ಕ್ರಮ ಕೈಗೊಂಡಿದ್ದಾರೆ.
ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಾ ದ್ಯಂತ ಕೃಷಿ ಇಲಾಖೆಯ ಅಧಿಕಾರಿಗಳಿಂದ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸೋ ಕಾರ್ಯ ಮುಂದು ವರೆಯಲಿದ್ದು, ಕೃಷಿ ಪರಿಕರ ಮಾರಾಟ ಗಾರರು ಕಡ್ಡಾಯವಾಗಿ ಪರವಾನಗಿಯನ್ನ ನವೀಕರಿಸಿ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು ಮತ್ತು ದಾಸ್ತಾನಿನ ಎಲ್ಲ ದಾಖಲಾತಿಗಳನ್ನ ಕಡ್ಡಾಯವಾಗಿ ಕಾಯಿದೆ ಅನ್ವಯ ನಿರ್ವಹಿಸಬೇಕು ಮತ್ತು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಪರಿಕರಗಳನ್ನು ಮಾರಾಟ ಮಾಡೋದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಅಧಿಕಾರ ವರ್ಗ ಎಚ್ಚರಿಸಿದೆ. ಉಭಯ ಜಿಲ್ಲೆಗಳ ರೈತರು ರಸಗೊಬ್ಬರವನ್ನ ಪಿಓಎಸ್ (POS) ಯಂತ್ರದ ಮೂಲಕವೇ ಖರೀದಿಸ ಬೇಕೆಂದು ಕೋರಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,754FollowersFollow
0SubscribersSubscribe
- Advertisement -spot_img

Latest Articles