ಬೆಂಗಳೂರು: ರಾಷ್ಟç ರಾಜಧಾನಿ ದೆಹಲಿಯಿಂದ ಬಂದ ಒಂದು ದೂರವಾಣಿ ಕರೆ ರಾಜ್ಯ ರಾಜಕಾರಣಗಳಲ್ಲಿ ನಡುಕ ಉಂಟು ಮಾಡಿದೆ. ೪೦% ಕಮಿಷನ್ ಆರೋಪ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರುವಾಗಲೇ ಈ ಕಮಿಷನ್ ಕರೆ ಭ್ರಷ್ಟರ ಎದೆಯಲ್ಲೂ ಆತಂಕ ಹುಟ್ಟು ಹಾಕಿದೆ.
ಪ್ರಧಾನಿ ಕಚೇರಿಯಿಂದ ದೂರುದಾರರಿಗೆ ಮಾಹಿತಿ ನೀಡುವಂತೆ ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಕೆಂಪಣ್ಣಗೆ ಪ್ರಧಾನಿ ಕಚೇರಿಯಿಂದ ಕರೆ ಬಂದಿದೆ ಎನ್ನಲಾಗುತ್ತಿದೆ. ಈ ಹಿಂದೆ ರಾಜ್ಯ ಸರಕಾರದ ವಿರುದ್ಧ ೪೦% ಕಮೀಷನ್ ಆರೋಪ ಮಾಡಿ ಪ್ರಧಾನಿಗೆ ಕೆಂಪಣ್ಣ ದೂರು ನೀಡಿದ್ದರು. “ಅಧಿಕಾರಿಗಳು ನಿಮ್ಮನ್ನು ಸಂಪರ್ಕಿಸಲಿದ್ದಾರೆ. ಭ್ರಷ್ಟಾಚಾರದ ದಾಖಲೆ ನೀಡುವಂತೆ” ಪ್ರಧಾನಿ ಕಚೇರಿಯಿಂದ ಕರೆ ಮಾಡಲಾಗಿತ್ತು ಎನ್ನಲಾಗುತ್ತಿದೆ.
ನನಗೆ ಪ್ರಧಾನಿಯವರ ಕಚೇರಿಯಿಂದ ಕರೆ ಬಂದಿಲ್ಲ. ಯಾವುದೇ ನೊಟೀಸ್ ಕೂಡ ಬಂದಿಲ್ಲ. ನಾನು ಕೆಲಸದ ಮೇಲೆ ಮೈಸೂರಿಗೆ ಬಂದಿದ್ದೆ. ನನ್ನ ಆಫೀಸಿಗೆ ಒಬ್ಬರು ಆಗಮಿಸಿದ್ದರಂತೆ. ಅವರು ಕೆಲವು ದಾಖಲೆಗಳನ್ನ ಕೇಳಿದ್ದಾರೆ. ಬಳಿಕ ಆಫೀಸಿನಿಂದ ನನಗೆ ಕರೆ ಮಾಡಿ ತಿಳಿಸಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ
ತಿಳಿಸಿದ್ದಾರೆ.