ನೂತನ ಸಚಿವರ ಖಾತೆ ಹಂಚಿಕೆ;ಶ್ರೀರಾಮುಲುಗೆ ಎಸ್‍ಟಿ ಕ್ಷೇಮಾಭಿವೃದ್ಧಿ, ಸಾರಿಗೆ

    0
    196

    ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಹೊಸದಾಗಿ ಸಂಪುಟ ಸೇರಿರುವ ಆರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ ನೀಡುವ ಮೂಲಕ ಬೊಮ್ಮಾಯಿ ಅಚ್ಚರಿ ಮೂಡಿಸಿದ್ದಾರೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಣಕಾಸು, ಡಿಪಿಎಆರ್, ಗೃಹ ಖಾತೆಯ ಗುಪ್ತಚರ, ಸಂಪುಟ ವ್ಯವಹಾರ, ಬೆಂಗಳೂರು ಅಭಿವೃದ್ಧಿ ಮತ್ತು ಹಂಚಿಕೆಯಾಗದ ಇತರೆ ಎಲ್ಲ ಖಾತೆಗಳನ್ನು ತಮ್ಮಲ್ಲಿ ಉಳಿಸಿಕೊಂಡಿದ್ದಾರೆ.ಬಿಎಸ್‍ವೈ ಸಂಪುಟದಲ್ಲಿ ಮೊದಲಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ತದನಂತರ ಸಮಾಜ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಸಿದ್ದ ಶ್ರೀರಾಮುಲುರವರಿಗೆ ಈ ಬಾರಿ ಪರಿಶಿಷ್ಟ ಪಂಗಡ ಕ್ಷೇಮಾಭಿüವೃದ್ಧಿ ಹಾಗೂ ಸಾರಿಗೆ ಖಾತೆಯನ್ನು ನೀಡಲಾಗಿದೆ.

    ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರಿಗೆ ಇಂಧನ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಖಾತೆ, ಬಿ.ಸಿ.ನಾಗೇಶಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಮುರುಗೇಶ ನಿರಾಣಿಗೆ ಬೃಹತ್ ಕೈಗಾರಿಕೆ ನೀಡಲಾಗಿದ್ದರೆ, ಸಿಸಿ ಪಾಟೀಲ ಅವರಿಗೆಲೋಕೋಪಯೋಗಿ ಇಲಾಖೆ ಕೊಡಲಾಗಿದೆ. ಯಡಿಯೂರಪ್ಪ ಅವರ ಅವಧಿಯಲ್ಲಿ ಸಚಿವರಾಗಿದ್ದ ಅನೇಕರಿಗೆ ಬೊಮ್ಮಾಯಿ ಸರಕಾರದಲ್ಲಿಯೂ ಅದೇ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆಯ ಹಿನ್ನೆಲೆಯಲ್ಲಿ ಸಂಪುಟ ರಚಿಸಲಾಗಿದ್ದು, ಜಾತಿವಾರು ಲೆಕ್ಕಾಚಾರದಂತೆ ಲಿಂಗಾಯತ, ದಲಿತ, ಹಿಂದುಳಿತ ವರ್ಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ.

    ಸಚಿವರು ಮತ್ತು ಅವರ ಖಾತೆ ವಿವರ

    • – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ- ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಹಣಕಾಸು, ಬೆಂಗಳೂರು ಅಭಿವೃದ್ಧಿ

    – ಗೋವಿಂದ ಕಾರಜೋಳ- ಜಲ ಸಂಪನ್ಮೂಲ

    – ಕೆ.ಎಸ್. ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

    – ಬಿ. ಶ್ರೀರಾಮುಲು- ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕ್ಷೇಮಾಭಿವೃದ್ಧಿ

    – ವಿ. ಸೋಮಣ್ಣ- ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ

    – ಉಮೇಶ್ ವಿ. ಕತ್ತಿ- ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ

    – ಎಸ್. ಅಂಗಾರ- ಮೀನುಗಾರಿಕೆ, ಬಂದರು

    – ಜೆ.ಸಿ. ಮಾಧುಸ್ವಾಮಿ- ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರ

    – ಆರಗ ಜ್ಞಾನೇಂದ್ರ- ಗೃಹ

    – ಡಾ.ಸಿ.ಎನ್. ಅಶ್ವತ್ಥನಾರಾಯಣ- ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಕೌಶಲ ಅಭಿವೃದ್ಧಿ

    – ಸಿ.ಸಿ. ಪಾಟೀಲ- ಲೋಕೋಪಯೋಗಿ

    – ಆನಂದ್ ಸಿಂಗ್- ಪರಿಸರ ಮತ್ತು ಪ್ರವಾಸೋದ್ಯಮ

    – ಕೋಟ ಶ್ರೀನಿವಾಸ ಪೂಜಾರಿ- ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ

    – ಮುರುಗೇಶ್ ಆರ್.ನಿರಾಣಿ- ಬೃಹತ್ ಮತ್ತು ಮಧ್ಯಮ ಕೈಗಾರಿಕೆ

    – ಅರಬೈಲ್ ಶಿವರಾಂ ಹೆಬ್ಬಾರ್- ಕಾರ್ಮಿಕ

    – ಎಸ್.ಟಿ. ಸೋಮಶೇಖರ್- ಸಹಕಾರ

    – ಬಿ.ಸಿ. ಪಾಟೀಲ- ಕೃಷಿ

    – ಬೈರತಿ ಬಸವರಾಜ- ನಗರಾಭಿವೃದ್ಧಿ

    – ಡಾ.ಕೆ. ಸುಧಾಕರ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ

    – ಕೆ. ಗೋಪಾಲಯ್ಯ- ಅಬಕಾರಿ

    – ಶಶಿಕಲಾ ಜೊಲ್ಲೆ- ಮುಜರಾಯಿ, ಹಜ್ ಮತ್ತು ವಕ್ಫ್

    – ಎಂ.ಟಿ.ಬಿ. ನಾಗರಾಜು- ಪೌರಾಡಳಿತ, ಸಣ್ಣ ಕೈಗಾರಿಕೆ

    – ಕೆ.ಸಿ. ನಾರಾಯಣ ಗೌಡ- ರೇμÉ್ಮ, ಯುವ ಸಬಲೀಕರಣ ಮತ್ತು ಕ್ರೀಡೆ

    – ಬಿ.ಸಿ. ನಾಗೇಶ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

    – ವಿ. ಸುನೀಲ್ ಕುಮಾರ್- ಇಂಧನ, ಕನ್ನಡ ಮತ್ತು ಸಂಸ್ಕøತಿ

    – ಹಾಲಪ್ಪ ಆಚಾರ್- ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

    – ಶಂಕರ ಪಾಟೀಲ್ ಬಿ. ಮುನೇನಕೊಪ್ಪ- ಕೈಮಗ್ಗ, ಜವಳಿ, ಸಕ್ಕರೆ

    – ಮುನಿರತ್ನ- ತೋಟಗಾರಿಕೆ, ಯೋಜನೆ ಮತ್ತು ಸಾಂಖ್ಯಿಕ

    Previous articleಲಾರಿಗೆ ಬೈಕ್ ಡಿಕ್ಕಿ ಸವಾರ ಸಾವು
    Next articleಸಚಿವ ಆನಂದ್ ಸಿಂಗ್ ಅಸಮಾಧಾನ.. ನಾನು ಬಯಸಿದ ಖಾತೆ ಸಿಕ್ಕಿಲ್ಲ

    LEAVE A REPLY

    Please enter your comment!
    Please enter your name here