ಬೆಂಗಳೂರು-ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆಯಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಮತ್ತೆ ಸಚಿವಾಕಾಂಕ್ಷಿಗಳ ಆಸೆಗೆ ತಣ್ಣೀರೆರಚಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ,ಇಂದು ದೆಹಲಿಗೆ ತೆರಳುತ್ತಿದ್ದು, ದೆಹಲಿಯಲ್ಲಿ ವರಿಷ್ಠ ನಿತೀನ್ ಗಡ್ಕರಿ ಜೊತೆ ಕೇಂದ್ರದ ಹಣಕಾಸು ಸಚಿವರೂ ಸೇರಿದಂತೆ ಮತ್ತಿತ್ತರ ನಾಲ್ಕಾರು ಸಚಿವರನ್ನು ಭೇಟಿ ಮಾಡುತ್ತೇನೆ.ಆದರೆ ಸದ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೃಟಿ ಮಾಡುವುದಿಲ್ಲ. ಸಚಿವ ಸಂಪುಟದಲ್ಲಿ ಉಳಿದಿರುವ ನಾಲ್ಕು ಮಂತ್ರಿ ಸ್ಥಾನಗಳನ್ನು ಸದ್ಯಕ್ಕೆ ಭರ್ತಿ ಮಾಡುವ ಬಗ್ಗೆ ಭೇಟಿಯಲ್ಲಿ ಯಾವುದೇ ಚರ್ಚೆ ಮಾಡುವುದಿಲ್ಲ. ಜೆ ಪಿ ನಡ್ಡಾ ಭೇಟಿ ಕಾರ್ಯಕ್ರಮ ಸದ್ಯವಂತೂ ಇಲ್ಲ.ಸಂಸದ ಪ್ರಹ್ಲಾದ್ ಜೋಷಿಯವರ ಮಗಳ ಆರತಕ್ಷತೆ ಕಾರ್ಯಕ್ರಮದಲ್ಲಿ ನಡ್ಡಾ ಅವರ ಜತೆ ಚರ್ಚೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಆ ಮೂಲಕ ಮಂತ್ರಿಮಂಡಲ ಸೇರಲು ಒತ್ತಡ ಹೇರುತ್ತಿದ್ದ ಲಾಬಿ ನಡೆಸುತ್ತಿದ್ದ ಸಚಿವಾಕಾಂಕ್ಷಿಗಳಿಗೆ ಸಿಎಂ ನಿರಾಸೆ ಮೂಡಿಸಿದರು.