ಮುಂಬೈ – ಮೂರು ದಶಕಗಳ ಆರ್ಥಿಕ ಸುಧಾರಣೆ ಸುಧಾರಣಾ ಕ್ರಮಗಳು ಜನರ ಜೀವ ಜೀವನಮಟ್ಟವನ್ನು ಸುಧಾರಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದೆ ಇದರ ಪರಿಣಾಮ ದೇಶ ಮುಂದೆ ಅಮೆರಿಕ ಮತ್ತು ಚೀನಾವನ್ನು ಮೀರಿಸಿ ಬೃಹತ್ ಆರ್ಥಿಕ ಶಕ್ತಿಶಾಲಿ ರಾಷ್ಟ್ರವಾಗಲಿದೆ ಎಂದು ಹೆಸರಾಂತ ಉದ್ಯಮಿ ಮುಕೇಶ್ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ಆರ್ಥಿಕ ಉದಾರೀಕರಣ ಮತ್ತು ಸುಧಾರಣೆ ಜಾರಿಗೆ ತಂದು 30 ವರ್ಷ ಕಳೆದ ಸಂದರ್ಭದಲ್ಲಿ ಅವರು ಈ ಅಭಿಪ್ರಾಯವನ್ನು ಅಂಕಣದ ಮೂಲಕ ಹಂಚಿಕೊಂಡಿದ್ದಾರೆ.
2047 ವೇಳೆಗೆ ಭಾರತ ಅಮೆರಿಕ ಮತ್ತು ಚೀನಾ ದೇಶಕ್ಕೆ ಸರಿಸಮನಾದ ಬೃಹತ್ ಆರ್ಥಿಕ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಆರ್ಥಿಕ ಸುಧಾರಣಾ ಕ್ರಮಗಳು ಜನರ ಜೀವನ ಮಟ್ಟ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಗಣನೀಯವಾಗಿ ಸುಧಾರಿಸುತ್ತಿದ್ದ ಇದರ ಫಲವಾಗಿ ದೇಶ ಆರ್ಥಿಕವಾಗಿ ಮುಂದೆ ಸಾಗಲು ಅನುಕೂಲವಾಗಿದೆ ಎಂದು ಅವರು ಹೇಳಿದರು