ಕೂಡ್ಲಿಗಿ:ಶ್ರೀ ಊರಮ್ಮ ದೇವಿ ಮಾಜಿ ದೇವದಾಸಿ ಮಹಿಳೆಯರ ಸ್ವಸಹಾಯ ಸಂಘದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಸಂಘ ಅಧ್ಯಕ್ಷ್ಷೆ ವೆಂಕಮ್ಮ ತಹಶಿಲ್ದಾರರಿಗೆ ಕೊಟ್ಟಿರುವ ಪತ್ರದಲ್ಲಿ ತಿಳಿಸಿದ್ದಾರೆ. ಸಂಘದ ಕೆಲವು ಸದಸ್ಯೆಯರು ಸಂಘದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿ ನನ್ನನ್ನು ಸಂಘದಿAದ ವಜಾ ಮಾಡಬೇಕು ಎಂದು ತಮಗೆ ಮನವಿ ಪತ್ರ ನೀಡಿದ್ದು, ಅವೆಲ್ಲವು ಸುಳ್ಳು. ಸಂಘದಡಿಯಲ್ಲಿ ಶೇಂಗಾ ಚಿಕ್ಕಿ ಘಟಕ ಆರಂಭ ಮಾಡಲು ಸಿಡಿಪಿಒ ಕಚೇರಿಯಿಂದ 1 ಲಕ್ಷ ರೂಪಾಯಿಗಳನ್ನು ನೀಡಿದ್ದು, 8 ಲಕ್ಷ ರೂಪಾಯಿಗಳನ್ನು ನಾನು ಸಾಲ ಮಾಡಿ ಘಟಕ ಆರಂಭ ಮಾಡಿದೆವು. ನಂತರ ದೇವದಾಸಿ ಪುನರ್ವಸತಿ ನಿಗಮದಿಂದ ಸಂಘದ 15 ಜನ ಸದಸ್ಯರಿಗೆ ತಾಲ 50 ಸಾವಿರ ರೂಪಾಯಿ ಸಾಲ, 50 ಸಾವಿರ ರೂಪಾಯಿ ಸಹಾಯಧನ ನೀಡಿದ್ದು, ಇದರಲ್ಲಿ ಬಂದAತಹ ಲಾಭವನ್ನು ಎಲ್ಲರು ಹಂಚಿಕೊಳ್ಳಬೇಕು ಎಂದು ಹೇಳಿದರು.