ಕೋಗಳಿ: ಗ್ರಂಥಾಲಯ ತಾತ್ಕಾಲಿಕ ಸ್ಥಳಾಂತರ

0
210

ಕೊಟ್ಟೂರು: ತಾಲ್ಲೂಕಿನ ಕೋಗಳಿಯ ಸಾರ್ವಜನಿಕ ಗ್ರಂಥಾಲಯವನ್ನು ತಾತ್ಕಾಲಿಕವಾಗಿ ಸಮೀಪದಲ್ಲಿಯೇ ಇರುವ ರೇಷ್ಮೆ ಇಲಾಖೆಯ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಜಿಲ್ಲಾ ಗ್ರಂಥಾಲಯ ಉಪ ನಿರ್ದೇಶಕಿ ಬಿ.ಕೆ.ಲಕ್ಷ್ಮಿ ಕಿರಣ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪಿಡಿಒ ಅವರಿಗೆ ಸೂಚಿಸಿದರು.
 ಸಾರ್ವಜನಿಕ ಗ್ರಂಥಾಲಯಕ್ಕೆ ಬೇಟಿನೀಡಿ ಪರಿಶೀಲಿಸಿ ನಂತರ ಅಧಿಕಾರಿಗಳಿಗೆ ಸೂಚಿಸಿದ ಅವರು, ಗ್ರಂಥಾಲಯದ ಕಟ್ಟಡ ನಿರ್ಮಾಣಕ್ಕೆ ಖಾಲಿ ನಿವೇಶನವಿದ್ದು  ಸಂಸದ ಅಥವಾ ಶಾಸಕರ ಅನುಧಾನ ದೊರೆತರೆ ಕಟ್ಟಡ ನಿರ್ಮಾಣ ಮಾಡಲು ಅನುಕೂಲವಾಗಲಿದೆ ಎಂದರು.
ಗ್ರಂಥಾಲಯವು ಹಳೆಯ ಕಟ್ಟಡದಲ್ಲಿದ್ದು ಇತ್ತೀಚೆಗೆ ಮಳೆಯಿಂದ ಸೋರುವ ಜತೆಗೆ ಗಾಳಿ,ಬೆಳಕಿನ ಸಮಸ್ಯೆಯಿರುವುದರಿಂದ ಓದುಗರು ಆತಂಕದಲಿಯೇ ಗ್ರಂಥಾಲಯಕ್ಕೆ ಬರುತ್ತಿದ್ದರು.ಗಾಳಿ,ಬೆಳಕು ಹಾಗೂ ಸೋರುವ  ಹಳೆಯ ಕಟ್ಟಡದ ಕೋಗಳಿಯ ಗ್ರಂಥಾಲಯದ ಕುರಿತು ಬಳ್ಳಾರಿ ಬೆಳಗಾಯಿತು ಪತ್ರಿಕೆಯಲ್ಲಿ ಜುಲೈ 23 ರಂದು ‘ ಕೋಗಳಿ: ಸೋರುವ ಗ್ರಂಥಾಲಯ ಎಂದು  ವರದಿ ಪ್ರಕಟಗೊಂಡಿತ್ತು. ವರದಿಗೆ ಸ್ಪಂದಿಸಿರುವದಕ್ಕೆ ಕೊಗಳಿ ಗ್ರಾಮದ ಜನರು ಪತ್ರಿಕೆಗೆ ಅಭಿನಂದನೆ ಸಲ್ಲಿಸಿದ್ದಾರೆ.

Previous articleಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಿ.ಎಸ್. ಯಡಿಯೂರಪ್ಪ
Next articleಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ

LEAVE A REPLY

Please enter your comment!
Please enter your name here