ಬೆಳಗಾಯಿತು ವಾರ್ತೆ
ಬಳ್ಳಾರಿ: ಡಾಕ್ಟರ್ಸ್ ಡೇ ಮತ್ತು ಎಸ್‌ಬಿಐ ಡೇ ಪ್ರಯುಕ್ತ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಶುಕ್ರವಾರ ನಗರದ ಎಸ್‌ಬಿಐ ಪ್ರಧಾನ ಕಚೇರಿಯ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.
ಶಿಬಿರದಲ್ಲಿ ಎಸ್‌ಬಿಐ ನೌಕರರು ರಕ್ತದಾನ ಮಾಡುವ ಮೂಲಕ ಎಸ್‌ಬಿಐ ಡೇ ಮತ್ತು ಡಾಕ್ಟರ್ಸ್ ಡೇ ಅನ್ನು ಆಚರಿಸಿದರು. ಈ ಸಂದರ್ಭದಲ್ಲಿ 137ನೇ ಸರಿ ರಕ್ತ ದಾನ ಮಾಡಿದ ಡಾಕ್ಟರ್ ನಾಗರಾಜ್ ಅವರಿಗೆ ಎಲ್ಲ ಸಿಬ್ಬಂದಿಗಳಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಡಿಜಿಎಂ ಪ್ರದೀಪ್ ನಾಯರ್, ಆರ್‌ಎಮ್ ಲಕ್ಷ್ಮಣ್ ಸಿಂಹ, ಎಜಿಎಮ್ ಶಂಕರ್, ಎಜಿಎಮ್ ರಾಮಕೃಷ್ಣ ಶಣಂ, ಡಾ.ನಾಗರಾಜ್, ಡಿಜಿಎಸ್ ರಾಮಕೃಷ್ಣ ಡಿ. ರೆಡ್‌ಕ್ರಾಸ್ ಸಂಸ್ಥೆಯ ಶಕೀಭ್, ಆರ್‌ಎಚ್ ಸೂರಜ್, ಧರ್ಮೇಂದ್ರ, ಪ್ರಹಲ್ಲಾದ ಕುಲಕರ್ಣಿ, ರವಿಂದ್ರ ಎಸ್, ರೆಡ್‌ಕ್ರಾಸ್ ಸಂಸ್ಥೆಯ ಭಾಷಾ, ಶಮಿಮ್ ಸೇರಿದಂತೆ ಇತರರು ಇದ್ದರು