9.2 C
New York
Friday, March 31, 2023

Buy now

spot_img

ಕರುಣೆ, ಮಾನವಿತೆ ಇಲ್ಲದ ಬಿಜೆಪಿ ಸರ್ಕಾರ ಜನ ಸಾಮಾನ್ಯರ ಶೋಷಣೆ ಮಾಡುತ್ತಿದೆ : ಯು.ಟಿ.ಖಾದರ್ ಆರೋಪ.

ಹರಪನಹಳ್ಳಿ: ಕರುಣೆ, ಮಾನವಿತೆ ಇಲ್ಲದ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಜನರ ಶೋಷಣೆ ಮಾಡುತ್ತಿವೆ ಎಂದು ಮಾಜಿ ಸಚಿವ ಹಾಗೂ ಹಾಲಿ ಉಳ್ಳಾಲ ಶಾಸಕ ಯು.ಟಿ.ಖಾದರ್ ಆರೋಪಿಸಿದರು.

ಪಟ್ಟಣದ ಬಾಣಿಗೇರಿಯ ಬೈಪಾಸ್ ನಲ್ಲಿರುವ ನೂತನ ಕಾಂಗ್ರೆಸ್ ಕಛೇರಿಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು ದೇಶ ಸೇರಿದಂತೆ ರಾಜ್ಯದಲ್ಲಿ ಸರ್ಕಾರ ನಡೆಸುವ ಯೋಗ್ಯತೆ ಬಿಜೆಪಿಗೆ ಇಲ್ಲ. ದೇಶದಲ್ಲಿ ಬಿಜೆಪಿಯಿಂದ ಟ್ಯಾಕ್ಸ್‌ ಟೆರರಿಸಂ ನಡೆಯುತ್ತಿದೆ. ದೇಶದ ಎಲ್ಲ ಪೆಟ್ರೋಲ್‌ ಬಂಕ್‌ಗಳು ಟ್ಯಾಕ್ಸ್‌ ಬೂತ್‌ಗಳಾಗಿವೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲೆ ಶೇ 9ರಷ್ಟು ತೆರಿಗೆ ವಿಧಿಸಲಾಗಿತ್ತು. ಆದರೆ, ಈಗಿನ ಕೇಂದ್ರದ ಬಿಜೆಪಿ ಸರ್ಕಾರ ಶೇ 35ಕ್ಕಿಂತ ಹೆಚ್ಚು ತೆರಿಗೆ ವಿಧಿಸಿದೆ. ಹೀಗಾಗಿಯೇ ಪೆಟ್ರೋಲ್‌, ಡೀಸೆಲ್‌ ಬೆಲೆ ನೆರೆ ರಾಷ್ಟ್ರಗಳಿಗಿಂತಲೂ ನಮ್ಮಲ್ಲಿ ಅಧಿಕವಾಗಿದೆ ಎಂದು ತಿಳಿಸಿದರು.

ಲಾಕ್‌ಡೌನ್‌ನಿಂದ ಜನ ಬಹಳ ಸಂಕಷ್ಟದಲ್ಲಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲಿ ಸಾವು ನೋವುಗಳಾಗಿವೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್‌, ಡೀಸೆಲ್‌, ಸಿಲಿಂಡರ್‌ ದರ ಹೆಚ್ಚಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು ಈ ಸರ್ಕಾರಕ್ಕೆ ನಿಜವಾಗಲೂ ಮಾನವೀಯತೆ, ಕರುಣೆ ಇದೆಯೇ ಸರ್ಕಾರಕ್ಕೆ ಬೇರೆ ಬೇರೆ ಮೂಲಗಳಿಂದ ಕೋಟ್ಯಂತರ ರೂಪಾಯಿ ಆದಾಯ ಬರುತ್ತದೆ. ಹೀಗಿರುವಾಗ ಜನಸಾಮಾನ್ಯರ ಮೇಲೆ ಹೊರೆ ಹಾಕುವುದು ಎಷ್ಟು ಸರಿ. ಕಷ್ಟಕಾಲದಲ್ಲಿ ಸರ್ಕಾರ ಜನರ ನೆರವಿಗೆ ಬರಬೇಕು. ಅದು ಬಿಟ್ಟು ಅವರನ್ನು ಮತ್ತಷ್ಟು ಕಷ್ಟಕ್ಕೆ ದೂಡುವುದು ಸರಿಯೇ ಎಂದು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಮಾಜಿ ಸಚಿವ ಹಾಗೂ ಹಾಲಿ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ ಮಾತನಾಡಿರಾಜ್ಯದ ಬಿಜೆಪಿ ಸರ್ಕಾರ ಕೊವೀಡ್ ಪೇಷನ್ಟ್ ಗಳಿಗೆ ನೀಡುವ ವೆಂಟಿಲೇಟರ್ ನಲ್ಲಿ ಹದಿನೆಂಟು ಲಕ್ಷ ಲೂಟಿ ಮಾಡಿದೆ. ರೈತರ ಯುವಕರ, ಬಡವರ, ಮಹಿಳೆಯರ, ವಿದ್ಯಾರ್ಥಿಗಳ ವಿರೋಧಿ ಈ ಬಿಜೆಪಿ ಸರ್ಕಾರಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು ಬಂಡವಾಳ ಶಾಹಿಗಳನ್ನು ಉದ್ಧಾರಕ್ಕಾಗಿ ಎಂತಹ ಕಾನೂನು ಗಳನ್ನು ಜಾರಿಗೆ ತರಲು ಸಿದ್ದವಿದೆ ಎಂದು ಆರೋಪಿಸಿದ ಅವರು ಬಿಜೆಪಿ ಚುನಾವಣೆಯಲ್ಲಿ ಮಾಡುವ ಗಿಮೀಕ್ ಗೆ ಜನರು ಮರುಳಾಗಬಾರದು ಹಗರಣ ರಹಿತ ಆಡಳಿತ ನೀಡಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಈ ರಾಜ್ಯದ ಜನತೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸಿರಾಜ್ ಶೇಖ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ವಿಧಾನ ಪರಿಷತ್ ಸದಸ್ಯ ವಿಜಯ ಸಿಂಗ್, ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶಿವಯೋಗಿ, ಕೆಪಿಸಿಸಿ ಸದಸ್ಯ ಮಂಜುನಾಥ್, ಮಹಿಳಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಆಶಾ ಲತ, ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯ ಶಶಿಧರ್ ಪೂಜಾರ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಟಿ.ಭರತ್, ಶಂಕ್ರನಹಳ್ಳಿ ಉಮೇಶ್ ಬಾಬು, ಜಿ.ಪ ಸದಸ್ಯರಾದ ಹೆಚ್.ಬಿ.ಪರಶುರಾಮಪ್ಪ, ಡಾ.ಉತ್ತಂಗಿ ಮಂಜುನಾಥ್, ಹಡಗಲಿ ಪುರಸಭೆ ಅಧ್ಯಕ್ಷ ವಾರದ ಗೌಸ್, ತಾಲೂಕು ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಹೆಚ್.ಕೆ.ಹಾಲೇಶ್, ಆಲದಹಳ್ಳಿ ಷಣ್ಮುಖಪ್ಪ, ಎಲ್.ಪೋಮ್ಯಾನಾಯ್ಕ, ಪಿ‌.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಸಾಬಳ್ಳಿ ಮುತ್ತಗಿ ಜಂಬಣ್ಣ, ಪುರಸಭೆ ಸದಸ್ಯ ಜೋಗಿನರ ಭರತೇಶ್, ಮುಖಂಡರಾದ ವಕೀಲ ಪ್ರಕಾಶ್ ಪಾಟೇಲ್, ತಾ.ಪ ಮಾಜಿ ಅಧ್ಯಕ್ಷ ಹನುಮಂತಪ್ಪ, ಟಿಎಪಿಎಂಎಸ್ ಅಧ್ಯಕ್ಷ ಪ್ರೇಮ್ ಕುಮಾರ್, ನಿರ್ದೇಶಕರಾದ ಗಿಡ್ಡಹಳ್ಳಿ ನಾಗರಾಜ್, ಟಿ.ತಿಮ್ಮಾನಾಯ್ಕ, ಡಿ.ನೇಮ್ಯಾ ನಾಯ್ಕ, ವೇದು ನಾಯ್ಕ, ಬಾಣದ ಅಂಜಿನಪ್ಪ, ಎಂ.ಮಜಿದ್, ಎಂ.ಕೆ.ರಾಯಲ್ ಸಿದ್ದಿಕ್, ರಿಯಾಜ್ ಅಹ್ಮದ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ಟಿ.ಪ್ರವೀಣ್ ಕುಮಾರ್, ಎನ್.ಎಸ್.ಯು.ಐ ಅಧ್ಯಕ್ಷ ಶ್ರೀಕಾತ್ ಯಾದವ್, ಮಹಾಂತೇಶ್ ನಾಯ್ಕ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ಕಿರಿಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,753FollowersFollow
0SubscribersSubscribe
- Advertisement -spot_img

Latest Articles