ಮಾನ್ವಿ: ಮಸ್ಕಿ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ದಿಸಿರುವ ಅಭಿವೃದ್ದಿ ಹರಿಕಾರ ಹಾಗೂ ಸಜ್ಜನ ರಾಜಕಾರಣಿ ಪ್ರತಾಪಗೌಡ ಪಾಟೀಲ್ ಇವರಿಗೆ ಸಮಸ್ತ ಮತದಾರ ಬಾಂಧವರು ತಮ್ಮ ಆಮೂಲ್ಯವಾದ ಮತ ನೀಡಿ ಆರಿಸಿ ತರಬೇಕೆಂದು ವಿಧಾನಪರಿಷತ್ತಿನ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಎನ್.ರವಿಕುಮಾರ ಮನವಿ ಮಾಡಿದರು.
ಮಸ್ಕಿ ತಾಲೂಕಿನ ಪಾಮನಕಲ್ಲೂರು, ವಟಗಲ್, ಕಾಚಾಪುರ, ಯಕ್ಲಾಸಪುರ, ಇರಕಲ್, ಕೋಟೆಕಲ್, ಮಲ್ಲದಗುಡ್ಡ, ವಟಗಲ್, ಆಮೀನಗಡ, ಡೊಣಮರಡಿ, ತೋರಣದಿನ್ನಿ, ಮರಕಂದಿನ್ನಿ, ಹಾಲಾಪುರ, ಬಳಗಾನೂರು ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮಗಳು, ಕ್ಯಾಂಪ್‍ಗಳಿಗೆ ತೆರಳಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಭಾರಿ ಪ್ರಚಾರ ನಡೆಸಿದ ನಂತರ ಸುದ್ದಿಗಾರರೂಂದಿಗೆ ಮಾತನಾಡಿದರು.
ಏ.17 ರಂದು ನಡೆಯುವ ಮಸ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‍ರಿಗೆ ಎಲ್ಲಾ ವರ್ಗದ ಮತದಾರರು ಒಗ್ಗಟ್ಟಾಗಿ ಮತ ನೀಡಿ ಗೆಲ್ಲಿಸಬೇಕು. ಪ್ರತಾಪಗೌಡರು ಜಯ ಸಾಧಿಸಿದ ಕೂಡಲೇ ಸಚಿವರಾಗಿ ಮಸ್ಕಿ ಸೇರಿದಂತೆ ಜಿಲ್ಲೆಯ ಅಭಿವೃದ್ದಿಗೆ ಕಂಕಣಬದ್ದರಾಗಿ ಕಾರ್ಯನಿರ್ವಹಿಸಲಿದ್ದಾರೆ ಆದ್ದರಿಂದ ಮಸ್ಕಿ ಕ್ಷೇತ್ರದ ಮತದಾರರು ಅಭಿವೃದ್ದಿಗಾಗಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡರನ್ನು ಗೆಲ್ಲಿಸಿ ಎಂದು ಎನ್.ರವಿಕುಮಾರ ಮತಯಾಚಿಸಿದರು.
ಈ ಸಂಧರ್ಬದಲ್ಲಿ ಸಚಿವ ಬಿ.ಶ್ರೀರಾಮುಲು, ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್, ಮಾಜಿಸಂಸದ ಕೆ.ವಿರೂಪಾಕ್ಷಪ್ಪ, ಶಾಸಕ ರಾಜೂಗೌಡ, ಎಸ್‍ಟಿ ಮೋರ್ಚಾ ಜಿಲ್ಲಾಧ್ಯಕ್ಷ ಅಯ್ಯಪ್ಪನಾಯಕ ಮ್ಯಾಕಲ್, ಎಸ್‍ಸಿ ಮೋರ್ಚಾ ಜಿಲ್ಲಾಧ್ಯಕ್ಷ ಶರಣಬಸವ ಭೋವಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಎಸ್.ಕುಮಾರಸ್ವಾಮಿ, ಮುಖಂಡರಾದ ಚನ್ನಬಸ್ಸಯ್ಯಸ್ವಾಮಿ, ವಿಶ್ವನಾಥ ಆಮೀನಗಡ, ತಾಲೂಕ ಉಪಾಧ್ಯಕ್ಷರಾದ ವಿರೂಪಾಕ್ಷಿಗೌಡ ಪೋತ್ನಾಳ್, ಶಿವಕುಮಾರಸ್ವಾಮಿ ಗವಿಗಟ್, ಶಿವಪ್ಪ ಭೂಸಾರೆ, ಸ್ವಾಮಿ ಕುಂದಾಪುರ, ಶಿವುಕುಮಾರ ರಾಯಚೂರು, ಅಮರೇಶ ಕಟ್ಟಿಮನಿ, ಬಸವರಾಜ ಗುಜ್ಜಲ್, ಮಲ್ಲಯ್ಯ ಬಿಜೆಪಿ, ಯಲ್ಲಪ್ಪ ಟೇಲರ್, ತಾಯಪ್ಪನಾಯಕ, ಈಶ್ವರ ಮುದ್ದಂಗುಡ್ಡಿ, ಮಲ್ಲಿಕ್ ಮಡಿವಾಳ, ಆಂಜಿ ಮುದ್ದಂಗುಡ್ಡಿ, ಗ್ರಾ.ಪಂ.ಸದಸ್ಯ ಶಿವಪ್ಪ, ಲಿಂಗಣ್ಣ ಕುರುಬರು, ಶ್ರೀಕಾಂತ, ಟಿಪ್ಪುಸುಲ್ತಾನ್, ಶರಣು ಅಮರಾವತಿ, ಮುತ್ತಣ್ಣ, ಬಂಗಾರಿ ರಮೇಶ ಸೇರಿದಂತೆ ಅನೇಕ ಹಿರಿಯ, ಕಿರಿಯ ಮುಖಂಡರುಗಳು, ಕಾರ್ಯಕರ್ತರು ಇದ್ದರು.