ಬಳ್ಳಾರಿ: ನಗರದ ೯ನೇ ವಾರ್ಡಿನ ಸೈಯದ್ ಸದರುದಿನ್ ಬಾಬಾ ದರ್ಗಾದ ಹತ್ತಿರ ೪೨.೫ ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶನಿವಾರ ನಗರ ಶಾಸಕ ಜಿ. ಸೋಮಶೇಖರ್ ರೆಡ್ಡಿ ಅವರು ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು ೯ನೇ ವಾರ್ಡಿನಲ್ಲಿ ಸುಮಾರು ೪೨.೫ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಯನ್ನು ಮಾಡಲು ಹಣ ಮಂಜುರಾಗಿದೆ. ಕೆಕೆಆರ್‌ಡಿಬಿಯಿಂದ ೩೫ಲಕ್ಷ ಮತ್ತು ಲ್ಯಾಂಡ್ ಆರ್ಮಿಯಿಂದ ೭.೫ ಲಕ್ಷ ಹಣ ಮಂಜುರಾಗಿದ್ದು, ಕಾಮಗಾರಿ ಪ್ರಾರಂಭ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಾರ್ಡ್ ಕಾರ್ಪೋರೇಟರ್ ಎಸ್ ಜಬ್ಬರ್ ಸಾಬ್,ಎಸ್ ಶರ್ಮಾ ಸಾಬ್, ರಫೀಕ್, ಸದ್ದಾಂ, ರಾಜ, ಮೇಹಬುಬ್ ಭಾಷಾ, ಶಿವರಾಜ್, ಶೇಶಪ್ಪ, ತಿಪ್ಪೇಸ್ವಾಮಿ, ವಿ. ಎರಿಸ್ವಾಮಿ ಸೇರಿದಂತೆ ವಾರ್ಡಿನ ನಿವಾಸಿಗಳು ಇದ್ದರು