ಬಳ್ಳಾರಿ: ನಗರದ ಸತ್ಯನಾರಾಯಣ ಪೇಟೆ ಮತ್ತು ವಡ್ಡರ ಬಂದಿಯಲ್ಲಿ ೨೦೨೦/೨೧ ರ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಅಡಿಯಲ್ಲಿ ಮಳೆ ನೀರಿನ ಚರಂಡಿ ನಿರ್ಮಾಣ ಕಾಮಗಾರಿಗೆ ಸಾರಿಗೆ ಪರಿಶಿಷ್ಟ ರ‍್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ಶ್ರೀರಾಮುಲು ಅವರು ಭೂಮಿ ಪೂಜೆಯನ್ನು ನೆರವೇರಿಸಿದರು.
ಸಚಿವ ಬಿ ಶ್ರೀರಾಮುಲು ಅವರು ಮಾತನಾಡಿ ನಗರದ ಸ್ಲಂ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಮಳೆಗಾಲದ ಸಮಯದಲ್ಲಿ ತೀವ್ರ ತೊಂದರೆ ಉಂಟಾಗುವುದನ್ನು ತಡೆ ಗಟ್ಟಲು ಸತ್ಯನಾರಾಯಣ ಪೇಟೆ ಮತ್ತು ವಡ್ಡರ ಬಂಡೆಯ ಎರಡು ರಾಜಕಾಲುವೆಗಳ ಅಭಿವೃದ್ಧಿಯನ್ನು ತಲಾ೩.೫ ಕೋಟಿಯಂತೆ ಒಟ್ಟು ೭ ಕೋಟಿ ರೂಪಾಯಿ ವೆಚ್ಚದಲ್ಲಿ ಮಳೆ ನೀರಿನ ಚರಂಡಿ ಅಭಿವೃದ್ಧಿಪಡಿಸಲಾಗುತ್ತಿದೆ.
ಸ್ಲಂ ಪ್ರದೇಶಗಳಲ್ಲಿನ ಕಡುಬಡವರಿಗೆ ಮಳೆಗಾಲದಲ್ಲಿ ತೊಂದರೆ ಆಗಬಾರದು ಎಂದುನ ಗರ ಶಾಸಕರಾದ ಜಿ ಸೋಮಶೇಖರ್ ರೆಡ್ಡಿ ಅವರು ವಿಶೇಷ ಅನುದಾನ ತರುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾರೆ ಎಂದರು.
ಈ ಸಂರ‍್ಭದಲ್ಲಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ನಗರಪಾಲಿಕೆಯ ಆಯುಕ್ತರಾದ ಪ್ರೀತಿ ಗೆಹ್ಲೊಟ್ ಮಹಾನಗರಪಾಲಿಕೆಯ ಮಹಾಪೌರರಾದ ರಾಜೇಶ್ವರಿ ಸುಬ್ಬರಾಯರು ಉಪ ಪೌರರಾದ ಮಾಲನಬಿ ಮತ್ತು ಮಹಾನಗರ ಪಾಲಿಕೆಯ ಸದಸ್ಯರು ಸೇರಿದಂತೆ ಅನೇಕರು ಇದ್ದರು.