ತ್ಯಾಗ,ಬಲಿದಾನ, ಸಹೋದರತೆ,ಸಂಕೇತವಾಗಿ ಬಕ್ರಿದ್ ಹಬ್ಬದವನ್ನು ಆಚರಿಸಲಾಗುತ್ತಿದೆ*ನಗರದಲ್ಲಿ ಕೋವಿಡ್ ಹಿನ್ನೆಲೆ ಬಕ್ರಿದ್ ಹಬ್ಬವನ್ನು ಸರಳವಾಗಿ ಆಚರಣೆ
ಈ ವೇಳೆ ಬಳ್ಳಾರಿ ಬೆಳಗಾಯಿತು ಪತ್ರಿಕೆಯೊಂದಿಗೆ ಮಾತನಾಡಿದ ಜಾಲ್ನಾವಿ ದರ್ಗಾದ ಮೌಲಿಗಳಾದ ಒವೈಸಿಸ್ ಅವರು ಕೋವಿಡ್ ಹಿನ್ನೆಲೆ ಸರ್ಕಾರದ ಆದೇಶದಂತೆ ಎಲ್ಲಿಯೂ ಕೂಡ ಸಮೂಹಿಕ ಪಾರ್ಥನೆಗಳನ್ನು ಹಮ್ಮಿಕೊಂಡಿಲ್ಲ. ತ್ಯಾಗ ಬಲಿದಾನ ಸಹೋದರತೆ,ಸಂಕೇತವಾಗಿ ಬಕ್ರಿದ್ ಹಬ್ಬದವನ್ನು ಆಚರಿಸಲಾಗುತ್ತಿದೆ ಈ ಹಬ್ಬದ ದಿನದಂದು ಮುಸ್ಲಿಂ ಸಮುದಾಯದ ಜನರು ದಾನ ಧರ್ಮಗಳನ್ನು ಮಾಡುವುದು ಹಿಂದಿನಿಂದಲೂ ನಡೆದುಕೊಂಡ ಬಂದ ಸಂಪ್ರದಾಯ ಎಂದ ಅವರು ಮುಂದಿನ ದಿನಗಳಲ್ಲಿ ಅಲ್ಲಾನ ದಯೆಯಿಂದ ಕೋವಿಡ್ ಸೋಂಕು ಕಡಿಮೆ ಆದರೆ ಮುಂದಿನ ವರ್ಷ ವಿಜೃಂಭಣೆಯಿಂದ ಆಚರಿಸುವಂತೆ ಆಗಲಿ ಎಂದರು.
ಈದ್ಗ ಮೈದಾನದಲ್ಲಿ ಮೊಹಮ್ಮದ್ ಇಕ್ಬಾಲ್ ಮಾತನಾಡಿ ಮುಸ್ಲಿಂ ಸಮುದಾಯದ ಜನರಿಗೆ ಬಕ್ರಿದ್ ಹಬ್ಬ ತುಂಬಾ ವಿಶೇಷವಾದ ಹಬ್ಬ ಆದರೂ ಕೋವಿಡ್ ಹಿನ್ನೆಲೆ ಸರಳವಾಗಿ ಮನೆಯಲ್ಲಿಯೇ ಪ್ರಾರ್ಥನೆ ಮಾಡುವ ಮೂಲಕ ಆಚರಿಸಲಾಗುತ್ತಿದೆ ಎಂದರು.