ಬೆಳಗಾಯಿತು ವಾರ್ತೆ
ಬಳ್ಳಾರಿ: ರಾಜಸ್ಥಾನ ಉದಯ ಪುರ್ ದಲ್ಲಿನ ಟೈಲರ್ ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ದೇಶಭಕ್ತ ನಾಗರೀಕರು ವೇದಿಕೆ ನೀಡಿದ ಸ್ವಯಂ ಪ್ರೇರಿತ ಬಳ್ಳಾರಿ ಬಂದ್ ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದಲ್ಲಿ ಬೆಳ್ಳಂ ಬೆಳಿಗ್ಗೆಯಿಂದ ನಗರದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದವು ಈ ವೇಳೆ ದೇಶಭಕ್ತ ನಾಗರೀಕರ ವೇದಿಕೆ, ಆರ್ ಎಸ್ ಎಸ್, ವಿಶ್ವ ಹಿಂದೂ ಪರಿಷತ್, ಶ್ರೀ ರಾಮ ಸೇನೆ ಹಿಂದೂಪರ ಸಂಘಟನೆಗಳು ಬೈಕ್ ರ್ಯಾಲಿ ಮೂಲಕ ನಗರದ ಬಂದ್ ಯಶಸ್ವಿಗೆ ಶ್ರಮಿಸಿದವು.
ನಗರದ ರಾಯಲ್ ವೃತ್ತದಲ್ಲಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮತ್ತು ಬಿಜೆಪಿ ಮುಖಂಡರು ಮಾನವ ಸರಪಳಿ ನಿರ್ಮಿಸಿ ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಘೋಷಣೆ ಕೂಗಿದರು.
ಶಾಸಕ ಸೋಮಶೇಖರ ರೆಡ್ಡಿ ಅವರು ಮಾತನಾಡಿ ನಮ್ಮ ದೇಶದಲ್ಲಿ ನ್ಯಾಯ ವ್ಯವಸ್ಥೆ ಬಹಳ ನಿಧಾನವಾಗಿದೆ ಇದರಿಂದ ಅಪರಾಧಿಗಳಿಗೆ ಶಿಕ್ಷೆ ಬಹಳ ತಡವಾಗಿ ಆಗುತ್ತೆ ಪಕ್ಕದಲ್ಲಿನ ಆಂಧ್ರ ಪ್ರದೇಶದ ರಾಜ್ಯದಲ್ಲಿ ವೈ ಎಸ್ ರಾಜಶೇಖರ್ ರೆಡ್ಡಿ ಅವರ ಕಾಲದಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದವರನ್ನು ಎನ್ ಕೌಂಟರ್ ಮಾಡಲಾಯಿತು. ಉತ್ತರ ಪ್ರದೇಶ ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ಅವರು ಸದ್ಯ ಆ ಕೆಲಸ ಮಾಡ್ತಿದ್ದಾರೆ ಅದೇ ರೀತಿ ಎನ್ ಕೌಂಟರ್ ಮಾಡಿದರೆ ಇಂತಹ ಪ್ರಕರಣಗಳ ಮರು ಕಳಿಸುವುದಿಲ್ಲ ಎಂದರು.
ಕನ್ನಯ್ಯ ಲಾಲ್ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಸದೆ ಜೆ.ಶಾಂತ, ವೀರ ಶೇಖರ ರೆಡ್ಡಿ, ಪಾಲಣ್ಣ, ತಿಲಕ್ ಹನುಮಂತು ಗುಡಿಗಂಟೆ,ಅಶೋಕ್ ಸೇರಿದಂತೆ ಇತರರು ಇದ್ದರು.