ಬೆಳಗಾಯಿತು ವಾರ್ತೆ
ಕೊಟ್ಟೂರು: ಭವಿಷ್ಯದಲ್ಲಿ ಸುಂದರ ಸಮಾಜ ನಿರ್ಮಿಸಲು ಮಾನವೀಯ ಮೌಲ್ಯಗಳನ್ನು ಉಳಿಸಲು ವಿದ್ಯಾರ್ಥಿ ಸಮೂಹಕ್ಕೆ ಸಂಕಲ್ಪ ಅಗತ್ಯ ಎಂದು ಜ್ಞಾನ ಭಿಕ್ಷಾ ಪಾದಯಾತ್ರಿ ಎಚ್. ಕೆ.ವಿವೇಕ್ ಕಿವಿಮಾತು ಹೇಳಿದರು.
ಪಟ್ಟಣದ ಗಂಗೋತ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾನವೀಯ ಮೌಲ್ಯಗಳ ಪುನರುತ್ಥಾನ ಕುರಿತು ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು15 ವರ್ಷಗಳ ನಂತರ ಕರ್ನಾಟಕದ ಭವಿಷ್ಯ ಪ್ರಸಕ್ತ ಸಾಲಿನ ಒಂದು ಕೋಟಿ ವಿದ್ಯಾರ್ಥಿ ಸಮೂಹದ ಹಸ್ತದಲ್ಲಿರುತ್ತದೆ. ಜಾತಿ ,ಧರ್ಮ,ಭಾಷೆಯ ಎಲ್ಲೆಗಳನ್ನು ಮೀರಿ ಒಗ್ಗಟ್ಟಿನಿಂದ ಭ್ರಷ್ಟಾಚಾರರಹಿತ ಮಾನವೀಯ ಮೌಲ್ಯಗಳ ಸಂಪದ್ಭರಿತ ರಾಜ್ಯವನ್ನಾಗಿ ಪರಿವರ್ತನೆ ಗೊಳಿಸಲು ಸನ್ನದ್ದರಾಗಿರಿ ಎಂದು ಸಲಹೆ ನೀಡಿದರು.
ಸ್ವಾಮಿ ವಿವೇಕಾನಂದರ ಆಶಯದಂತೆ ವಿದ್ಯಾರ್ಥಿಗಳ ಅವರ ತತ್ವಾದರ್ಶಗಳನ್ನು ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡು ತಮ್ಮ ಅಮೂಲ್ಯವಾದ ವ್ಯಾಸಂಗದ ಬದುಕನ್ನು ಬಂಗಾರಮಯ ವಹಿಸಿಕೊಳ್ಳಬೇಕು.ಪೂರ್ವಜರ ಕಾಲದಲ್ಲಿ ಒಪ್ಪತ್ತಿನ ಗಂಜಿಗೂ ಕಷ್ಟಕರವಾಗಿತ್ತು. ಆದರೆ ಮಾನವೀಯ ಮೌಲ್ಯಗಳು ವಿಜೃಂಭಿಸುತ್ತಿದ್ದವು ಎಂದು ತಿಳಿಸಿದರು.
ಜನಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಆಧುನಿಕತೆಯ ಜೀವನ ಶೈಲಿಯಿಂದ ಅವಿಭಕ್ತ ಕುಟುಂಬದಲ್ಲಿನ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದ ಅವರು ವೈದ್ಯಕೀಯ ವಿಜ್ಞಾನ ಮುಂದುವರೆದಷ್ಟು ಮನುಷ್ಯನಿಗೆ ಅನಾರೋಗ್ಯ ಸಮಸ್ಯೆ ಉಲ್ಬಣವಾಗುತ್ತಿದೆ ಎಂದು ಹೇಳಿದರು.
ಆರೋಗ್ಯ ಕ್ಷೇತ್ರ ಹಣಗಳಿಕೆಯ ದಂಧೆಗಿಳಿದು ಸಂಪೂರ್ಣ ವ್ಯಾಪಾರಿಕರಣವಾಗಿದೆ.ಅಲ್ಲದೆ ಸಮಾಜದಲ್ಲಿ ವ್ಯಕ್ತಿಯ ಘನತೆ ಹಾಳು ಮಾಡುವ ಮದ್ಯದಂಗಡಿ ಗಳು ಊರಿನ ಮಧ್ಯೆ ಬಂದು ಕುಳಿತಿವೆ.ಭವಿಷ್ಯ ಸೃಷ್ಠಿಸುವ ಗ್ರಂಥಾಲಯಗಳು ಮುಚ್ಚುತ್ತಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಚಿನ್ ತೆಂಡೊಲ್ಕರ್ ,ಸಿನಿತಾರೆಯರು ಬ್ರಾಂಡ್ ಅಂಬಾಸೀಡರ್ ಗಳಾಗಿ ವೈಯಕ್ತಿಕ ಲಾಭಕ್ಕೆ ಕೂಲ್ ಡ್ರಿಂಕ್ಸ್ ಗಳ ವಿದೇಶಿ ಕಂಪನಿಗಳನ್ನು ಪ್ರಚಾರಪಡಿಸುತ್ತಾರೆ.ಯುವ ಸಮೂಹ ಜಾಗೃತರಾಗಿ ಎಳೆನೀರು ,ಹಣ್ಣಿನ ರಸಗಳನ್ನು ಬಳಕೆಮಾಡಿದರೆ ರೈತರಿಗೆ ಲಾಭ ಗಳಿಸುವ ಜೊತೆ ದೇಶದ ಅಭಿವೃದ್ದಿ ಸಾದ್ಯ ಎಂದರು.
ದಶಕಗಳ ಹಿಂದಿನ ಸಿನಿಮಾಗಳಲ್ಲಿ ಸಂಸ್ಕಾರ ಹೆಣ್ಣನ್ನು ಗೌರವಿಸುವ ಪಾತ್ರಗಳು ಅಭಿನಯವಾಗುತ್ತಿದ್ದವು.ಪ್ರಸಕ್ತವಾಗಿ ದಾರವಾಹಿಗಳಲ್ಲಿ ಶತ್ರುತ್ವ ವೈಭವೀಕರಿಸಿ ಸೃಷ್ಠಿಸುವ ಪಾತ್ರಗಳು ಅಭಿನಯವಾಗುತ್ತಿವೆ ಎಂದು ಹೇಳಿದರು.
ವಿದ್ಯಾರ್ಥಿ ಸಮೂಹದ ಮೇಲಿರುವ ಸೋಮಾರಿತನ,ವಿವೇಚನಾ ಶಕ್ತಿ ಕೊರತೆ,ಹಿರಿಯರಿಗೆ ಅಗೌರವಿಸುತ್ತಾರೆ ಎಂಬ ಮೂರು ಆರೋಪಗಳನ್ನು ತೊಳೆಯುವ ಜವಾಬ್ದಾರಿ ನಿಮ್ಮದಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ನಿರ್ಮಲ ಶಿವನಗುತ್ತಿ, ಗುರುಬಸವರಾಜ್ ,ಎಐಎಸ್ ಎಫ್ ರಾಜ್ಯಮುಖಂಡ ಮಾದಿಹಳ್ಳಿ ಕೆ.ಮಂಜಪ್ಪ, ಉಪನ್ಯಾಸಕರಾದ ಮರುಳಪ್ಪ,ಶಿವಕುಮಾರ್ , ಶಶಿಕಿರಣ್ ಭರತ್ ಶಂಭುಲಿಂಗಪ್ಪ ಶಿವಕುಮಾರ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.