ಬೆಳಗಾಯಿತು ವಾರ್ತೆ
ಬಳ್ಳಾರಿ: ಹಿಂದಿನ ಕಾಲದಲ್ಲಿ ಪತ್ರಿಕೆ ಬೆಳೆಯಬೇಕಾದರೆ ಬಹಳ ಕಷ್ಟದ ಪರಿಸ್ಥಿತಿ ಇತ್ತು.
ಇವಾಗಿನ ಸವಲತ್ತುಗಳು ಅಂದಿನ ಕಾಲದಲ್ಲಿ ಇಲ್ಲದ ಸಮಯದಲ್ಲಿ ನಮ್ಮ ಬಳ್ಳಾರಿ ಬೆಳಗಾಯಿತು ಪತ್ರಿಕೆ ಬಹಳ ಕಷ್ಟ ದಿಂದ ಬೆಳೆದು ಬಂದ ಪತ್ರಿಕೆ ಯಾಗಿದೆ ಎಂದು ಬಳ್ಳಾರಿ ಬೆಳಗಾಯಿತು ಪತ್ರಿಕೆಯ ಸಹ ಸಂಪಾದಕರಾದ ವಿ. ಅನೂಪ್ ಕುಮಾರ್ ಅವರು ಹೇಳಿದರು.
ನಗರದ ಪೋಲಾ ಪ್ಯಾರಿಡಸ್ ಹೋಟೆಲ್ ನಲ್ಲಿ ಆಯೋಜಿಸಿದ್ದ ಬಳ್ಳಾರಿ ಬೆಳಗಾಯಿತು ಪತ್ರಿಕೆಯ 33ನೇ ವಾರ್ಷಿಕೋತ್ಸವ ದಲ್ಲಿ ಅವರು ಮಾತನಾಡಿದರು.
ಬಳ್ಳಾರಿ ಬೆಳಗಾಯಿತು ಪತ್ರಿಕೆ ಪ್ರಾರಂಭವಾದ ಸಮಯದಲ್ಲಿ ಕಂಪ್ಯೂಟರ್ , ಇಂಟರ್ನೆಟ್ ಇಲ್ಲದೆ ಕೈಗಳಿಂದ ಅಕ್ಷರ ಜೊಡಣೆ ಮಾಡಿ ಪತ್ರಿಕೆಗಳನ್ನ ಹೊರತರಲಾಗುತಿತ್ತು.
ಪತ್ರಿಕೆಗೆ ಯಾವುದೇ ರಜೆ ಇಲ್ಲದೆ ನಿರಂತರವಾಗಿ ಕಾರ್ಯ ನಿರ್ವಹಿಸುವ ಸಂಸ್ಥೆ ಯಾಗಿದೆ.
ಲಾಕ್ ಡೌನ್ ಸಮಯದಲ್ಲಿ ಪತ್ರಿಕೆ ನಡೆಸುವುದು ಬಹಳ ಕಷ್ಟ ಆಗುತಿತ್ತು ಅಂತಹ ಸಮಯದಲ್ಲಿ ನಮ್ಮ ತಲೆಗೆ ಬಂದ ಓಲೋಚನೆಯೇ ಯೂವ್ ಟ್ಯೂಬ್ ಪ್ರಾರಂಭ ಮಾಡುವುದು. ಅಂದಿನಿಂದ ನಮ್ಮ ಬೇಳಗಾಯಿತು ಪತ್ರಿಕೆಯ ಹೆಸರಲ್ಲಿ ವಿವಿಧ ಸುದ್ಧಿಗಳನ್ನು ಬಿತ್ತರಿಸುತ್ತ ಇಂದು ಒಂದು ಹಂತಕ್ಕೆ ಬಂದು ನಿಂತಿದೆ ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲರಾದ ಹೇಮಣ್ಣ ಅವರು ಮಾತನಾಡಿ, ಪತ್ರಿಕೆ ಸುಮಾರು ವರ್ಷದಿಂದ ಉತ್ತಮ ಸುದ್ಧಿಗಳನ್ನು ಬಿತ್ತರಿಸುತ್ತ ಬಂದಿದೆ. ಪತ್ರಿಕೆ ಉತ್ತಮ ಸುದ್ದಿಗಳನ್ನು ಬಿತ್ತರಿಸುತ್ತ ಸಮಾಜದ ಬದಲಾವಣೆಗೆ ತನ್ನದೆಯಾದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಪತ್ರಿಕೆಗಳು ಸಮಾಜದ ಬದಲಾವಣೆ ಮಾಡುವ ಶಕ್ತಿ ಹೊಂದಿದೆ ಎಂದರು.
ಇದೇ ಸಂದರ್ಭದಲ್ಲಿ ಕೆಕ್ ಕತ್ತರಿಸಿ 33ನೇ ವಾರ್ಷಿಕೋತ್ಸವ ಸಂಭ್ರಮ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಹನುಮಂತ ಗುಡಿಗಂಟಿ, ಪೋಲಾ ಹೋಟೆಲ್ ಸಂಸ್ಥಾಪಕರಾದ ಪೋಲ ಪ್ರವೀಣ, ಕಾರ್ಪೊರೇಟ್ ಉಜ್ವಲ, ಶಾಂತಾಬಾಯಿ ಹಾಜರಿದ್ದರು.