ಬೆಳಗಾಯಿತು ವಾರ್ತೆ
ಹೊಸಪೇಟೆ (ವಿಜಯನಗರ): ಪ್ರಥಮ ದರ್ಜೆ ಸಿವಿಲ್ ಗುತ್ತಿಗೆದಾರ ಅಲ್ಲಂ ಸಣ್ಣ ಹನುಮಂತಪ್ಪ ಹಾಗೂ ಅವರ ಅಣ್ಣ ಅಲ್ಲಂ ಗೋವಿಂದಪ್ಪ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬುಧವಾರ ದಾಳಿ ನಡೆಸಿ, ಸಣ್ಣ ಹನುಮಂತಪ್ಪ ಅವರಿಗೆ ಸೇರಿದ ನೆಹರೂ ಕಾಲೊನಿ, ಬಳ್ಳಾರಿ, ಕುಡುತಿನಿ ಹಾಗೂ ಬೆಂಗಳೂರಿನ ಮನೆ, ಅವರ ಅಣ್ಣ ಅಲ್ಲಂ ಗೋವಿಂದಪ್ಪನವರಿಗೆ ಸೇರಿದ ಮನೆ ಮೇಲೂ ಐ.ಟಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆದಾಯ ತೆರಿಗೆ ಇಲಾಖೆಯ 16 ತಂಡಗಳು ಏಕಕಾಲಕ್ಕೆ ಐದು ಸ್ಥಳಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಶೋಧ ನಡೆಸಿದ್ದಾರೆ. ಸಿವಿಲ್ ಗುತ್ತಿಗೆದಾರರಾಗಿರುವ ಸಣ್ಣ ಹನುಮಂತಪ್ಪ ಅವರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ದೂರುಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಗೊತ್ತಾಗಿದೆ.