ಬೆಳಗಾಯಿತು ವಾರ್ತೆ
ಬಳ್ಳಾರಿ: ಲಿಯಾ ಸೊಸೈಟಿ ವತಿಯಿಂದ ಬುಧವಾರ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಅನುಗ್ರಹ ವಿಶೇಷ ಮಕ್ಕಳ ಶಾಲೆಯಲ್ಲಿ ವಿವಿಧ ರೀತಿಯ ಹಣ್ಣುಗಳ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಾಲಾಯಿತು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಂದೀಪ್ ಸೂರ್ಯವಂಶಿ ಅವರು ಮಾತನಾಡಿ ಪರಿಸರದ ಕಾಳಜಿ ನಮ್ಮ ಜವಾಬ್ದಾರಿಯಾಗಿದೆ. ಇರುವುದು ಒಂದೇ ಭೂಮಿ ಇದನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಕೊಡುವ ಜವಾಬ್ದಾರಿ ನಮ್ಮದಾಗಿರುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಜಾಯಿಂಟ್ ಡೈರೆಕ್ಟರ್ ಡಿಸ್ಟ್ರಿಕ್ಟ್ ಇಂಡಸ್ಟ್ರಿಯಲ್ ಸೆಂಟರ್‌ನ ಸೋಮಶೇಖರ್, ಶಾಲೆಯ ಫಾದರ್ & ಸಿಸ್ಟರ್ಸ್ ಲಿಯಾ ಅಬ್ರಹಾಂ, ಫರೀದಾ, ಮಂಜುಳಾ, ಭಾಷಾ ಸನ್ನಿ, ಸುನೀಲ್, ವನಜಾಕ್ಷಿ ಮತ್ತು ಮಕ್ಕಳು ಹಾಜರಿದ್ದರು.