ಬೆಳಗಾಯಿತು ವಾರ್ತೆ
ಮಸ್ಕಿ: ಮುಂಗಾರು ಸಾಂಸ್ಕೃತಿಕ ಹಬ್ಬದ ನಿಮಿತ್ತ ಮಸ್ಕಿ ತಾಲೂಕಿನ ಗೂಗೇಬಾಳ ಗ್ರಾಮದಲ್ಲಿ ನಡೆಯುತ್ತಿರು ಭಾರ ಕಲ್ಲು ಎಳೆಯುವ ಎತ್ತುಗಳ ಸ್ಪರ್ಧೆಯು ನೆರೆದಿದ್ದ ಜನರನ್ನು ಮನಸೆಳೆಯಿತು.
ಎರಡೂವರೆ ಟನ್ ಭಾರದ ಕಲ್ಲೂಗಳನ್ನು ಜೋಡು ಎತ್ತುಗಳು ಎಳೆಯುವ ದೃಷಕಂಡ ರೈತರು, ಸಾರ್ವಜನಿಕರು ಹರ್ಷದ ಮಹಾಹೊಳೆಯನ್ನೆ ಹರಿಸಿದರು. ಕೇಕೆ, ಚಪ್ಪಾಳೆ ಸಿಳ್ಳೆಗಳಿಂದ ಗೂಗೇಬಾಳ ಗ್ರಾಮದಲ್ಲಿ ಕಿಕ್ಕಿರಿದಿತ್ತು. ಮಂಗಳವಾರ ಬೆಳಗ್ಗೆ 11 ಗಂಟೆಯಿAದಲೇ ಆರಂಭಗೊAಡ ಸ್ಪರ್ಧೆಗಳು ಸೂರ್ಯದ ಬಿಸಿಲಿನಷ್ಟೇ ವೇಗವಾಗಿ ಅತ್ಯಂತ ರೋಚಕ ಗಟ್ಟ ತಲುಪಿತ್ತು.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಜನರು, ಅತ್ಯಂತ ಕುತೂಹಲದಿಂದ ವೀಕ್ಷಿಸಿದರು.
ಎರಡೂವರೆ ಟನ್ ಭಾರ ಎಳೆಯುವ ಸ್ಪರ್ಧೆಯಲ್ಲಿ ಕರಿಯಪ್ಪ ಅವರ ಜೋಡಿ ಎತ್ತುಗಳು ಭಾಗವಹಿಸಿ ಮೊದಲ ಸ್ಥಾನ ಗಳಿಸಿದವು.
ಆಧುನಿಕತೆಯ ಗುಂಗಿನಲ್ಲಿ ದೇಶಿ ಕಲೆಗಳ ಮರೆಯಾಗುತ್ತಿದ್ದು, ಇಂತಹ ಕ್ಷಿಷ್ಟಕರ ಸನ್ನಿವೇಶದಲ್ಲಿ ಮೂರು ದಿನಗಳ ಕಾಲ ಗ್ರಾಮೀಣ ಪ್ರದೇಶದ ಕ್ರೀಡೆ, ಸ್ಪರ್ಧೆ, ಕಲೆ ಸಂಸ್ಕೃತಿಗಳನ್ನು ಬಿಂಬಿಸುವ ಕೆಲಸ ಅಮೋಘವಾಗಿದೆ ಎಂದು ಶಿವರಾಜ್ ಗೂಗೇಬಾಳ ಮೆಚ್ಚುಗೆ ವ್ಯಕ್ತಪಡಿಸಿದರು.
ಬಹುಮಾನ ವಿವರ
ಎರಡೂವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಮೊದಲ ಸ್ಥಾನ
ಕರಿಯಪ್ಪನವರ ಎತ್ತುಗಳು ನಿಗದಿತ 20 ನಿಮಿಷಗಳಲ್ಲಿ 2015 ಫೀಟ್ ಎಳೆದು ಮೊದಲ ಸ್ಥಾನ ಪಡೆದಿದ್ದು, ಊರಿನ ಗಣ್ಯ ವ್ಯಕ್ತಿಗಳು ಹಾಗೂ ಅವರ ಕುಟುಂಬಸ್ಥರು ಹಾಗೂ ಸಂಬAಧಿಕರು ಬೆಳ್ಳಿ ಕಡಗ ಹಾಗೂ ನಗದು ವಿತರಿಸಲಾಯಿತು.
ಎತ್ತುಗಳನ್ನು ಗ್ರಾಮದ ನಾನಾ ಬೀದಿಗಳಲ್ಲಿ ಮೆರವಣಿಗೆ ಮಾಡಿ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗೂಗೇಬಾಳ ಗ್ರಾಮದ ಮುಖಂಡರು ಹಾಗೂ ಸುತ್ತಮುತ್ತಲಿನ ಎಲ್ಲ ರೈತರು ಭಾಗವಹಿಸಿದ್ದರು.