ಶ್ರೀ ರಾಮುಲು ಡಿಸಿಎಂ ಕನಸು ಭಗ್ನ
ಬಳ್ಳಾರಿ: ಶ್ರೀರಾಮುಲುಗೆ ಡಿಸಿಎಂ ಸೇರಿದಂತೆ ನಗರ ಶಾಸಕ ಸೋಮ ಶೇಖರ ರೆಡ್ಡಿ, ಸಿರುಗುಪ್ಪ ಶಾಸಕ ಸೋಮಲಿಂಗಪ್ಪ ಅವರು ಈ ಬಾರಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಸಚಿವ ಸಂಪುಟ ದಲ್ಲಿ ಬಳ್ಳಾರಿ ಜಿಲ್ಲೆಯ ಶಾಸಕರಿಗೆ ಮೊದಲ ಬಾರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.
ಈ ಹಿಂದೆ ಸರ್ಕಾರ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ 31ನೇ ಜಿಲ್ಲೆಯಾಗಿ ವಿಜಯ ನಗರ ಜಿಲ್ಲೆಯನ್ನು ರಚಿಸಿದ ಹಿನ್ನೆಲೆ ಜಿಲ್ಲೆಯ ಅಭಿವೃಧ್ಧಿಗೆ ಮತ್ತು ಮುಂದಿನ ಚುನಾವಣೆಯಲ್ಲಿ ಪಕ್ಷ ಬಲ ಪಡಿಸಲು ಸಚಿವ ಸ್ಥಾನ ನೀಡಬೇಕು ಎಂದು ಹಲವು ಬಿಜೆಪಿ ಷಕ್ಷದ ಮುಖಂಡರು, ಸಂಘ ಸಂಸ್ಥೆಗಳ ನಾಯಕರು ಆಗ್ರಹ ವ್ಯಕ್ತಪಡಿಸಿದ ಹಿನ್ನೆಲೆ ಒಂದಷ್ಟು ಬಳ್ಳಾರಿ ಜಿಲ್ಲೆಗೆ ಹೆಚ್ಚಿನ ಪ್ರಾಧನ್ಯತೆ ಸಿಗಬಹುದು ಎಂಬ ನಿರೀಕ್ಷೆ ಇತ್ತು.
ಬಳ್ಳಾರಿ ಜಿಲ್ಲೆಗೆ ಹೆಚ್ಚಿನ ಪ್ರಾತಿನಿಧ್ಯತೆ ಇಲ್ಲ:ಶಾಸಕ ಸೋಮ ಶೇಖರ್ ರೆಡ್ಡಿ, ಸೋಮಲಿಂಗಪ್ಪ, ಅವರು ಸಹ ಹೊಸದಾಗಿ ಈ ಬಾರಿ ಬೊಮ್ಮಾಯಿ ಸಚಿವ ಸಂಪುಟ ಸೇರುವ ನಿರೀಕ್ಷೆ ಇಟ್ಟುಕೊಂಡಿದ್ದರು ಆದರೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸದ್ಯ ಬಳ್ಳಾರಿ ಜಿಲ್ಲೆಗೆ ಹೆಚ್ಚಿನ ಪ್ರಾತಿನಿಧ್ಯತೆ ನೀಡಿದಂತೆ ಕಾಣುತ್ತಿಲ್ಲ..? ಈ ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಿ ಶ್ರೀರಾಮುಲು, ಜನಾರ್ಧನ ರೆಡ್ಡಿ, ಕರುಣಾಕರ ರೆಡ್ಡಿ ಸೇರಿದಂತೆ ಒಟ್ಟು ಮೂವರು ಸಚಿವರಾಗಿದ್ದರು ಆದರೆ ಸದ್ಯದ ಪರಿಸ್ಥಿತಿ ಹಾಗೇ ಇಲ್ಲ..! ಶಾಸಕ ಶ್ರೀ ರಾಮುಲು ಅವರಿಗೆ ಸಚಿವ ಸ್ಥಾನ ಸಿಕ್ಕರು ಅದು ಚಿತ್ರದುರ್ಗದ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಎಸ್.ಟಿ. ಕೋಟದಲ್ಲಿ ಸಿಕ್ಕಿದೆ, ಹಾಗೂ ಶಾಸಕ ಆನಂದ ಸಿಂಗ್ ಅವರಿಗೆ ಸಚಿವ ಸ್ಥಾನ ಸಿಕ್ಕರು ಆದರೆ ಅದೂ ಇತ್ತಿಚಿಗೆ 31ನೇ ಜಿಲ್ಲೆಯಾಗಿ ವಿಜಯ ನಗರ ಜಿಲ್ಲೆಯನ್ನು ರಚನೆ ಆದ ಹಿನ್ನೆಲೆ ಅದೂ ಬಳ್ಳಾರಿ ಜಿಲ್ಲೆಗೆ ಪ್ರಾತಿನಿಧ್ಯ ಕೊಂಟ್ಟಂತೆ ಆಗುವುದಿಲ್ಲ ಎಂದು ಜಿಲ್ಲೆಯ ಬಿಜೆಪಿ ಪಕ್ಷದ ವಲಯದಲ್ಲಿ ಮುಖಂಡರು ಸೇರಿದಂತೆ ಜನತೆಯ ಅಭಿಪ್ರಾಯವಾಗಿದೆ.
ಕಾದೂ ನೋಡಬೇಕಿದೆ: ಮುಂದಿನ ದಿನಗಳಲ್ಲಿ ಆದರೂ ಜಿಲ್ಲೆಯ ಹೊಸ ಶಾಸಕರಿಗೆ ಅವಕಾಶ ನೀಡುತ್ತಾರೋ ಇಲ್ಲವೂ ಕಾದು ನೋಡಬೇಕಿದೆ ಅಲ್ಲದೇ ಬಿಜೆಪಿ ಪಕ್ಷದ ವರಿಷ್ಠರ ಇಂದಿನ ಈ ತೀರ್ಮಾನದಿಂದಾಗಿ ಜಿಲ್ಲೆಯಲ್ಲಿನ ಹಲವು ಮುಖಂಡರಿಗೆ ಬೇಸರವಾಗಿದ್ದಂತು ನಿಜ ಮುಂದಿನ ದಿನಗಳಲ್ಲಿ ಈ ಬೇಸರ ಯಾವ ರೀತಿಯ ತಿರುವುಗಳಿಗೆ ಕಾರಣವಾಗುತ್ತೋ ಕಾದೂ ನೋಡಬೇಕಿದೆ.
ಜಿಲ್ಲಾ ಉಸ್ತುವಾರಿ ಯಾರಿಗೆ: ಬಳ್ಳಾರಿ ಜಿಲ್ಲೆ ವಿಭಜನೆ ನಂತರ ಈ ಹಿಂದೆ ಬಳ್ಳಾರಿ ಜಿಲ್ಲಾ ಉಸ್ತುವಾರಿಗಳಾಗಿದ್ದ ಆನಂದ ಸಿಂಗ್ ವಿರುದ್ಧ ವಿರೋಧ ಸಹ ವ್ಯಕ್ತವಾಗಿತ್ತು. ಈ ಸಲ ಆದರೂ ಬಳ್ಳಾರಿ ಜಿಲ್ಲಾ ಉಸ್ತುವಾರಿಯನ್ನು ಯಾರಿಗೆ ಕೊಡುತ್ತಾರೆ ಎಂಬ ಕೂತುಹಲ ಸಹ ಮುಂದುವರೆದಿದೆ.
ಶ್ರೀ ರಾಮುಲು ಡಿಸಿಎಂ ಕನಸು ಭಗ್ನ:ಇನ್ನೂ ಕಳೆದ ಬಾರಿಯೂ ಶ್ರೀ ರಾಮುಲು ಅವರಿಗೆ ಡಿಸಿಎಂ ಪದವಿ ನೀಡುತ್ತೇವೆ ಎಂದು ಹೇಳಿ ಮಾತು ತಪ್ಪಿದ ಬಿಜೆಪಿ ಪಕ್ಷದ ವರಿಷ್ಠರು ಈ ಬಾರಿ ಬೊಮ್ಮಾಯಿ ಸರ್ಕಾರದಲ್ಲಿ ಆದರೂ ಡಿಸಿಎಂ ಪದವಿ ಸಿಗಬಹುದು ಎಂಬ ನಿರೀಕ್ಷೆ ತುಸು ಹೆಚ್ಚೆಯಿತ್ತು. ಆದರೆ ವರಿಷ್ಠರು ತೀರ್ಮಾನದಂತೆ ಡಿಸಿಎಂ ಪದವಿ ಬೇಡ ಎಂಬ ಮಾತಿನಿಂದ ಅದೂ ಕೂಡ ಹುಸಿಯಾಗಿರುವುದು ಶ್ರೀ ರಾಮುಲು ಅವರು ಡಿಸಿಎಂ ಆಗಬೇಕು ಎಂಬ ಶ್ರೀ ರಾಮುಲು ಮತ್ತು ಅವರ ಅಭಿಮಾನಿಗಳು ಕನಸು ಭಗ್ನವಾಗಿದೆ.
ಪಕ್ಷ ಯಾವ ಸಂದರ್ಭದಲ್ಲಿ ಯಾರಿಗೆ ಯಾವ ಸ್ಥಾನ ಮಾನ ನೀಡಬೇಕೂ ನಿಡುತ್ತಾ ಬಂದಿದೆ ಸದ್ಯ ಸಚಿವ ಸ್ಥಾನ ನೀಡಿದೆ ಹಾಗೇ ಮುಂದಿನ ದಿನಗಳಲ್ಲಿ ಕೂಡ ಸೂಕ್ತವಾದ ಸಮಯದಲ್ಲಿ ಸೂಕ್ತ ಸ್ಥಾನ ಮಾನ ನೀಡುತ್ತೆ ಎನ್ನುವ ವಿಶ್ವಾಸ ವಿದೆ -ಶ್ರೀ ರಾಮುಲು,ನೂತನ ಸಚಿವ, ಶಾಸಕ ಮೊಳಕಾಲ್ಮೂರು ಕ್ಷೇತ್ರ