ಬಳ್ಳಾರಿ: ಮಹಾನಗರ ಪಾಲಿಕೆ ಚುನಾವಣೆ ಕೊನೆಗೂ ಘೋಷಣೆ ಆಗಿದೆ ಎ.೮ ರಂದು ಅಧಿಸೂಚನೆ ಹೊರಬೀಳಲಿದೆ. ಈ ಮೂಲಕ ಕಳೆದ ಎರಡು ವರ್ಷಗಳಿಂದ ಚುನಾವಣೆ ಯಲ್ಲಿ ಸ್ಪರ್ಧಿಸುವ ಸ್ಪರ್ಧಾ ಆಕಾಂಕ್ಷಿಗಳ ಕನಸು ನನಾಸಗಲಿದೆ. ನಗರದಲ್ಲಿನ ೩೫ ವಾರ್ಡುಗಳನ್ನು ೩೯ ವಾರ್ಡುಗಳನ್ನಾಗಿ ವಿಂಗಡಿಸಿ ಅವುಗಳಿಗೆ ಚುನಾವಣೆ ಘೋಷಣೆ ಮಾಡಿದೆ. ಎ.೮ ರಿಂದ ೧೫ ವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಎ. ೧೬ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ ೧೯ ರ ವರೆಗೆ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಬಹುದಾಗಿದೆ. ಸ್ಪರ್ಧೆ ಏರ್ಪಟ್ಟ ವಾರ್ಡಗಳಲ್ಲಿ ಏಪ್ರಿಲ್ ೨೭ ರಂದು ಮತದಾನ ಬೆಳಗ್ಗೆ ೭ ರಿಂದ ಸಂಜೆ ೫ ರವರೆಗೆ ನಡೆಯಲಿದೆ. ಏಪ್ರಿಲ್ ೩೦ ರಂದು ಮತಗಳ ಎಣಿಕೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎಂ.ಆರ್.ನಾಗರಾಜ ಸೋಮುವಾರ ಆದೇಶ ಹೊರಡಿಸಿದ್ದಾರೆ.
ವಾರ್ಡ್ ಮೀಸಲಾತಿ ವಿವಾದ ವಿಚಾರಣೆ ಎ.೫ರಂದು
ಏಪ್ರಿಲ್ ೫ರಂದು ವಾರ್ಡ್ ಮೀಸಲಾತಿ ಕುರಿತ ವಿವಾದ ಇನ್ನು ಧಾರವಾಡ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ಸ್ಪರ್ಧಾಕಾಂಕ್ಷಿಗಳು ಕಾದು ನೋಡುತ್ತಿದ್ದರು ಆದರೂ ಕೆಲ ಆಕಾಂಕ್ಷಿಗಳು ಮಾತ್ರ ಈಗಾಗಲೇ ತಮ್ಮ ತಮ್ಮ ವಾರ್ಡಗಳಲ್ಲಿ ಸಮಾಜ ಸೇವಾ ಕಾರ್ಯ ಚಟುವಟಿಕೆಗಳ ಮೂಲಕ ಮತದಾರರ ಗಮನ ಸೆಳೆಯಲು ತೊಡಗಿದ್ದಾರೆ.
ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯ ಸಂಕ್ಷಿಪ್ತ ಮಾಹಿತಿ :
ಎ. ೧೫ ವರೆಗೆ ನಾಮಪತ್ರ ಸಲ್ಲಿಕೆ, ಎ. ೧೬ ನಾಮಪತ್ರಗಳ ಪರಿಶೀಲನೆ, ಎ.೧೯ ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆ ದಿನ, ಎ. ೨೭ ಮತದಾನ, ಎ. ೩೦ ಮತಗಳ ಎಣಿಕೆ,
ನಗರದಲ್ಲಿನ ಒಟ್ಟು ೩೯ ವಾರ್ಡುಗಳಿಗೆ ಚುನಾವಣೆ ನಡೆಯಲಿದೆ.