ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಚಿವ ಖಾದರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ನಕ್ಷತ್ರ ಹೋಟಲ್ ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಹಾನಗರ ಪಾಲಿಕೆ ಚುನಾವಣೆ ಘೋಷಣೆ ಆಗಿದ್ದು ಆ ಹಿನ್ನಲೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿ ರಚಿಸಿದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಲು ಬಹಳಷ್ಟು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ ಆದರೆ ಆಯ್ಕೆ ಸಮಿತಿಯ ಸಬೆಯಲ್ಲಿ ಪಕ್ಷನಿಷ್ಠೆ, ಸಮಾಜಿಕ ನ್ಯಾಯ, ಗೆಲ್ಲುವ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂದು ತೀರ್ಮಾನಿಸಲಾಗಿದೆ.
ಎಂಟು ತಂಡ ರಚನೆ: 39 ವಾರ್ಡ್‍ಗಳಲ್ಲಿ ಒಂದಕ್ಕಿಂತ ಹೆಚ್ಚಿನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಟಿಕೆಟ್ ಆಕಾಂಕ್ಷಿಗಳಾಗಿದ್ದು ಪ್ರತಿಯೊಬ್ಬ ಅಭ್ಯರ್ಥಿಗಳ ಅಭಿಪ್ರಾಯ ಮತ್ತು ಆಕ್ಷೇಪಗಳು ತಿಳಿಯಲು ಹಾಗೂ ಅಭ್ಯರ್ಥಿಗಳ ಆಯ್ಕೆ ಮಾಡಲು ಸುಲುಭವಾಗುವ ದೃಷ್ಠಿಯಿಂದ ಒಟ್ಟು ಎಂಟು ಗ್ರೂಪ್ ಗಳಿದ್ದು, ಪ್ರತಿ ಗ್ರೂಪ್‍ನಲ್ಲಿ ನಾಲ್ಕು, ಐದು ವಾರ್ಡ್ ಗಳಿರುತ್ತೇವೆ. ನಾಗೇಂದ್ರ, ನಾಸೀರ್ ಹುಸೇನ್, ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಸೂರ್ಯ ನಾರಯಣ, ಅನಿಲ್ ನಾಯ್ಡು, ನಿರಂಜನ್ ನಾಯ್ಡು, ಇವರು ಪ್ರತಿಯೊಬ್ಬ ಅಭ್ಯರ್ಥಿಗಳೊಂದಿಗೆ ಚರ್ಚಿಸಿ ಕೇಂದ್ರ ಸಮಿತಿಗೆ ವರದಿ ನೀಡಲಿದ್ದಾರೆ. ತದನಂತರ ಕೆಪಿಸಿಸಿ ಮತ್ತು ಸಿಎಲ್‍ಪಿ ನಾಯಕರು ಸಭೆಯಲ್ಲಿ ಚರ್ಚಿಸಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಲಿದ್ದಾರೆ.
ಬಜೆಟ್ ನಲ್ಲಿ 125 ಕೋಟಿ: ಅನುದಾನ ಸಿಕ್ಕಿಲ್ಲ, ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಗೆ 125 ಕೋಟಿ ಬಜೆಟ್ ನಲ್ಲಿ ಘೋಷಣೆ ಮಾಡಿತ್ತು ತದನಂತದ ಬಂದ ಸರ್ಕಾರ ಎರಡು ಬಜೆಟ್ ಮಂಡಿಸಿದೆ ಆದರೂ ಇನ್ನೂ ಹಣ ಬಿಡುಗಡೆ ಮಾಡಿಲ್ಲ ಎಂದರು
ಇಂದಿರಾ ಕ್ಯಾಂಟೀನ್ ನಡೆಸುವ ಯೋಗ್ಯತೆ ಇಲ್ಲ: ಜನ ಹಸಿವಿನಿಂದ ಉಪವಾಸ ಇರಬಾರದು ಎಂದು ಸಿದ್ಧರಾಮಯ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಮೂಲಕ ಬಡಜನರ ಹಸಿವು ನೀಗಿಸುವ ಕೆಲಸ ಮಾಡಿತ್ತು ಆದರೆ ಇಂದಿನ ಸರ್ಕಾರಕ್ಕೆ ಇಂದಿರಾ ಕ್ಯಾಂಟೀನ್‍ಗಳನ್ನು ನಡೆಸುವ ಯೋಗ್ಯತೆ ಇಲ್ಲ, ಇಂತವರಿಗೆ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜನರು ಅಧಿಕಾರ ನೀಡಬಾರದು.
ಕೆಎಸ್ಸಾರ್ಟಿಸಿ ನೌಕಕರನ್ನು ತಾಯಿ ಹೃದಯದಿಂದ ನೋಡಿ:ಸರ್ಕಾರ ಕೆಎಸ್ಸಾರ್ಟಿಸಿ ನೌಕಕರನ್ನು ತಾಯಿ ಹೃದಯದಿಂದ ನೋಡಿ ಅವರ ಸಮಸ್ಯೆಗಳನ್ನು ಕೂಡಲೇ ಪರಿಹಾರ ಮಾಡಬೇಕಿದೆ ಆರನೇ ವೇತನ ಆಯೋಗ ಜಾರಿ ಮಾಡಬೇಕು ನೌಕರರೊಂದಿಗೆ ಕೂತು ಚರ್ಚಿಸಿಬೇಕಾಗಿದೆ ಎಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಪತ್ರಕರ್ತರ ವೇತನ ಕೂಡ ಹೆಚ್ಚಾಗಬೇಕಿದೆ ಪ್ರತಿಪಾಧಿಸಿದರು. ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಎಲ್.ಹನುಂತಯ್ಯ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಅನಿಲ್ ಲಾಡ್, ಉಗ್ರಪ್ಪ, ಅಲ್ಲಂ ವೀರಭದ್ರಪ್ಪ, ನಾಗೇಂದ್ರ, ಕೊಂಡಯ್ಯ, ಅಂಜಿನೇಯಲು ಮುಂತಾದವರು ಇದ್ದರು.