ಬಳ್ಳಾರಿ : ಬೀದರ್ ಜಿಲ್ಲೆಯ ಪೀರ್ ಪಾಷಾ ದುರ್ಗವೇ ಪುರಾತನಕಾಲದ ವಿಶ್ವಗುರು ಬಸವಣ್ಣನವರ ಅನುಭವ ಮಂಟಪ ಎಂದು ವಿಶ್ವ ಲಿಂಗಾಯತ ಮಹಾಜನ ಪರಿಷತ್ ಆಗ್ರಹಿಸಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾತನಾಡಿದ ಅವರು12ನೇ ಶತಮಾನದ ವಿಶ್ವಗುರು ಬಸವಣ್ಣನವರ ಮೂಲ ಅನುಭವಮಂಟಪದ ಸ್ಥಳ ವಶಕ್ಕೆ ಪಡೆಯಲು ಕೋರಿದ್ದು. ಸನ್ಮಾನ್ಯ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಭಾರತದ ಪುರಾತತ್ವ ಪರಿಶೋಧನ ಹಾಗೂ ಸಂಶೋಧನಾ ಇಲಾಖೆಯ ಕೇಂದ್ರವನ್ನು ಪೀರ್ ಪಾಷಾ ದರ್ಗಾ ಸ್ಥಳದ ಹತ್ತಿರ ಸ್ಥಾಪನೆ ಮಾಡಬೇಕೆಂದು ಹಾಗೂ ಅನುಭವ ಮಂಟಪವನ್ನು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಸ್ಮಾರಕವಾಗಿ ಅಭಿವೃದ್ಧಿ ಪಡಿಸಬೇಕೆಂದು ವಿಶ್ವ ಲಿಂಗಾಯತ ಮಹಾಜನ ಪರಿಷತ್ ಬಳ್ಳಾರಿ ಇವರು ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷರು ಶ್ರೀನಿವಾಸ್ ಪಟೇಲ್ ಸಿಕೆ ದೊಡ್ಡ ಬಸವನಗೌಡ ಪಲ್ಲೇದ ದೊಡ್ಡಪ್ಪ ಸಂತೋಷ್ ಅಂಗಡಿ ಎಸ್ಕೆ ಪಂಪಣ್ಣ ಗೌಡ ಸೇರಿದಂತೆ ಇತರರು ಇದ್ದರು