ಜನ ತಾಂತ್ರಿಕ ವ್ಯವಸ್ಥೆಯಲ್ಲಿ ನಿತ್ಯ ಸ್ಮರಣೀಯ ದೀಪ್ತಿ. ಅವರ ದಾರ್ಶನಿಕತೆ ವಿಶ್ವಮಾನವ ಏಕತಾ. ಅವರ ಹೋರಾಟದ ಬದುಕು ಅನನ್ಯ ಅಸಾಮಾನ್ಯ. ಭಾರತೀಯರ ಗುಂಡಿಗೆಯಲ್ಲಿ ಅಂಬೇಡ್ಕರ್ ರವರ ಹೆಸರು ಎಂದೂ ಅಳಿಸಲಾಗದ ಮುದ್ರೆ. ಅಂಬೇಡ್ಕರ್ ಜನಿಸುವ ಮೊದಲು ಅಸ್ಪøಶ್ಯ ಭಾರತ. ಈ ಪುಣ್ಯ ಪುರುಷ ಜನಿಸಿದ ನಂತರ ಜಾತ್ಯಾತೀತ ಭಾರತ. ಪೀಡಿತ-ತಾಡಿತ ಬಹು ಜನರ ನೋವಿನ ಬವಣೆಯನ್ನು ತಪ್ಪಿಸಿದ ತಪಸ್ವಿ. ನೀರು ಕುಡಿಯಲು ಜಾತಿಯ ಪೆಡಂಭೂತ ಅಡ್ಡ. ಓದಲು, ಓಡಾಡಲು, ಉಸಿರಾಡಲು, ಅಡಿಗಡಿಗೂ ಕುಲಪಿಶಾಚಿಯ ತಾಂಡವ ನೃತ್ಯವಾಡುತ್ತಿದ್ದ ಕಾಲಘಟ್ಟದಲ್ಲಿ ಆ ಭಗವಂತನೇ ಈ ಭೂಮಿಗೆ ತನ್ನ ಪ್ರತಿನಿಧಿಯಾಗಿ ಕಳುಹಿಸಿಕೊಟ್ಟ ಮಹಾನ್ ಕ್ರಾಂತಿ ಕಿರಣವೇ ಡಾ|| ಬಿ.ಆರ್. ಅಂಬೇಡ್ಕರ್. ಮತ ಮುಸಿಕಿನ ಮತ ಮೌಢÀ್ಯಗಳ ಮತವುನ್ಮಾದಕರಿಗೆ ಧರ್ಮದ್ವೇಷದಿಂದ ಒಡೆದು, ಚೂರು ಚೂರಾದ ಮನಸ್ಸುಗಳಿಗೆ ಧರ್ಮ ಮನುಷ್ಯನಿಗಾಗಿ-ಮನುಷ್ಯ ಧರ್ಮಕ್ಕಾಗಿಯಲ್ಲ ಎಂದು ಹೇಳಿದ ಮಹಾನ್ ಚಿಂತಕ.