ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಭ್ಯ
ಬಳ್ಳಾರಿ: ನಗರದ ದೇವಿ ನಗರದ ಮುಖ್ಯ ರಸ್ತೆ ಬಸವನಕುಂಟೆ ಹತ್ತಿರದ ಫೀರ್ ಸಾಬ್ ಮಕಾನ್ ಹತ್ತಿರ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಬಿಜೆಪಿ ಯುವ ಮುಖಂಡರಾದ ವಿ.ಅನೂಪ್ ಕುಮಾರ್ ಅವರ ನೂತನವಾಗಿ ಪ್ರಾರಂಭವಾಗಿರುವ ಜನ ಸಂಪರ್ಕ ಕಚೇರಿಯಲ್ಲಿ ಆ.23 ಸೋಮುವಾರದಂದು 18ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಉಚಿತ ಕೋವಿಡ್ ಲಸಿಕಾ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ವಿ.ಅನೂಪ್ ಕುಮಾರ್ ತಿಳಿಸಿದ್ದಾರೆ.
ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆ 1ನೇ ಮತ್ತು 2ನೇ ಡೋಸ್ (ಕೋವ್ಯಾಕ್ಸಿನ್ ಪಡೆದು 28 ದಿನ ಪೂರ್ಣಗೊಂಡವರು ಹಾಗೂ ಕೋವಿಶೀಲ್ಡ್ ಲಸಿಕೆ ಪಡೆದು 84 ದಿನಗಳು ಪೂರ್ಣಗೊಂಡವರು) ಲಸಿಕೆಯನ್ನು ಪಡೆಯಬಹುದು. ಬೆಳಿಗ್ಗೆ 10ಗಂಟೆ ಯಿಂದ ಸಂಜೆ 5ಗಂಟೆ ವರೆಗೆ ನಡೆಯಲಿದೆ. ಕೋವಿಡ್ ಲಸಿಕೆ ಪಡೆಯಲು ಬರುವ ಸಾರ್ವಜನಿಕರು ಆಧಾರ್ ಕಾರ್ಡ್ ನ್ನು ಕಡ್ಡಾಯವಾಗಿ ತರಬೇಕು ಎಲ್ಲಾರೂ ತಪ್ಪದೆ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.