ಬಳ್ಳಾರಿ:ಕರ್ನಾಟಕ ಬ್ಯಾಂಕ್ ನ ಎಟಿಎಂಗೆ ತುಂಬ ಬೇಕಿದ್ದ 56,18000 ಹಣ ದೋಚಿದ್ದ ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸಿದ ಪೊಲೀಸರು.
ಹೌದು ಬ್ರೂಸ್ ಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮೇ 21ರಂದು ಮಧ್ಯಾಹ್ನ ಬಳ್ಳಾರಿ ನಗರದ ಮೀನಾಕ್ಷಿ ಸರ್ಕಲ್ ನಲ್ಲಿರುವ ಕರ್ನಾಟಕ ಬ್ಯಾಂಕ್ ಎಟಿಎಂಗೆ ಹಣ ತುಂಬುವ ಸಿ. ಎಂ. ಎಸ್. ಕಂಪನಿಯಲ್ಲಿ ಕೆಲಸ ಮಾಡುವ ನೀಲಕಂಠ (26) ಸಿಎಂಎಸ್ ನಲ್ಲಿ ಕಸ್ಟೋಡಿಯನ್ ಕೆಲಸ ಕೆಲಸ ಮಾಡುತ್ತಿದ್ದು. ತಾಲೂಕಿನ ಹೊಸ ಮಸೀದಿ ಪುರ ಗ್ರಾಮದ ನಿವಾಸಿ. ಒಬ್ಬನೇ ಬ್ಯಾಂಕಿನ ಕ್ಯಾಶ್ ಕೌಂಟರ್ ಕ್ಯಾಬಿನ್ ನಲ್ಲಿ ಚೀಲದಲ್ಲಿ ಇಟ್ಟಿದ್ದ ಎಟಿಎಂ ಗಳಿಗೆ ತುಂಬಬೇಕಾದ ನಗದು ಹಣ ಕಳ್ಳತನ ಮಾಡಿದ್ದರು ಈ ಕುರಿತು ನಗರದ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಸಿಬ್ಬಂದಿ ದೂರು ನೀಡಿದ ಹಿನ್ನೆಲೆ ಪೂಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಾದ 24ಗಂಟೆಯೊಳಗೆ ಆರೋಪಿಯ ಬಂಧನ ಮತ್ತು 56 ಲಕ್ಷ 18 ಸಾವಿರ ನಗದು ಹಣ ವಶ ಪಡಿಸಿಕೊಳ್ಳಲಾಗಿದೆ ಎಂದು ಎಎಸ್ ಪಿ ಗುರುನಾಥ್ ಬಿ ಮತ್ತೂರು ಅವರು ಮಾಹಿತಿ ನೀಡಿದ್ದಾರೆ