ಬೆಳಗಾಯಿತು ವಾರ್ತೆ
ಬಳ್ಳಾರಿ: ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗದ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವೆ ಎಂದು ಮಾಚಿ ಶಾಸಕ ಅನಿಲ್ ಲಾಡ್ ಅವರು ಹೇಳಿದರು.
ನಗರದ ಮರ್ಚೇಡ್ ಹೋಟೆಲ್ ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನನ್ನನ್ನು ಕಡೆಗೆಣಿಸಿ ಇತ್ತೀಚೆಗೆ ಬಿಜೆಪಿಯಿಂದ ಕಾಂಗ್ರೆಸ್ ಗೆ ಬಂದವರಿಗೆ ಟಿಕೆಟ್ ಕೋಡುತ್ತಾರೆ, ಆದರೆ ಹತ್ತು ವರ್ಷದಿಂದ ದುಡಿದ ನನಗೆ ಪಾರ್ಟಿ ಅನ್ಯಾಯ ಮಾಡಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಟಿಕೆಟ್ ಘೋಷಣೆ ಮಾಡುವಲ್ಲಿ ವಿಳಂಬ ಮಾಡಿ ಬಳ್ಳಾರಿ ನಗರದಿಂದ ನಾರಾ ಭರತ್ ರೆಡ್ಡಿ ಅವರಿಗೆ ಪಕ್ಷ ಮಣೆ ಹಾಕುತ್ತಾರೆ. ಆದರೆ ಅವರಿಗೆ
ಪಕ್ಷ ಯಾವ ಮಾನದಂಡದ ಮೇಲೆ ಟಿಕೆಟ್ ನೀಡಿದೆ
ಹಾಗೆ ನನಗೆ ಯಾವ ಮಾನದಂಡದ ಮೇಲೆ ಕಡೆಗೆಣಿಸಿದ್ದಿರಿ ? ಪಕ್ಷದಲ್ಲಿ ಇದ್ದು ಕೆಲಸ ಮಾಡಿದವರಿಗೆ ಒಂದು ನ್ಯಾಯ, ಹೊರಗಿನಿಂದ ಬಂದವರಿಗೆ ಒಂದು ನ್ಯಾಯ ನಾ
ಎಂದು ಪ್ರಶ್ನಿಸಿದರು.
2018ರಲ್ಲಿ ಬಳ್ಳಾರಿಯ ಪಾಲಿಕೆಯಲ್ಲಿ ಒಬ್ಬ ಕಾಂಗ್ರೆಸ್ ಕಾರ್ಪೊರೇಟರ್ ಇರಲಿಲ್ಲ ಆದರೆ ನಾನು ಬಂದ ಮೇಲೆ ಪಾಲಿಕೆಯಲ್ಲಿ ಕಾಂಗ್ರೆಸ್ ಬರಲು ಕಾರಣವಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನೀಡದೆ ನಿರ್ಲಕ್ಷ್ಯ ವಹಿಸಿದ್ದರಿಂದ ನಾನು ನನ್ನ ಮತದಾರರ ಅಭಿಪ್ರಾಯ ತಿಳಿದು ನಂತರ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿನಿ. ನನಗೆ ಅನ್ಯಾಯವಾದರಿಂದ ಚುನಾವಣೆ ಮುಗಿಯುವವರೆಗೂ ಕಪ್ಪು ಬಟ್ಟೆಗಳನ್ನ ಧರಿಸಿಕೊಂಡು ಜನರ ಹತ್ರ ಹೋಗುತ್ತೆನೆ ಎಂದರು.
ಈ ಸಂದರ್ಭದಲ್ಲಿ ಲಕ್ಷ್ಮಣ, ಹರ್ಷದ್, ಮಲ್ಲಿಕಾರ್ಜುನ, ಕಿರಣ, ದಾಸ್ ಸೇರಿದಂತೆ ಇತರರು ಹಾಜರಿದ್ದರು.
*ನಾಮಪತ್ರ ಸಲ್ಲಿಕೆ*
ಬಂಡಾಯ ಅಭ್ಯರ್ಥಿಯಾಗಿ ಇದೆ ಏ. 19 ಅಥವಾ 20ರಂದು ನಾಮಪತ್ರ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.