ಬೆಳಗಾಯಿತು ವಾರ್ತೆ
ಬಳ್ಳಾರಿ: ವೈದ್ಯರು ಮತ್ತು ಐಐಟಿಗಳಾಗಬೇಕೆಂದು ಸಾವಿರಾರು ವಿದ್ಯಾರ್ಥಿಗಳು ಹೊಂದಿರುವ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ದೇಶದಲ್ಲಿ ಪರೀಕ್ಷಾ ಪೂರ್ವ ಸಿದ್ಧತಾ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಆಕಾಶ್ ಬೈಜೂಸ್ ಇದೀಗ ತನ್ನ ಜಾಲವನ್ನು ವಿಸ್ತರಣೆ ಮಾಡುವುದನ್ನು ಮುಂದುವರಿಸಿದ್ದು, ಬಳ್ಳಾರಿಯಲ್ಲಿ ತನ್ನ ಮೊದಲ ಕ್ಲಾಸ್‌ರೂಂ ಸಂಟರ್ ಅನ್ನು ಆರಂಭ ಮಾಡಿದೆ ಎಂದು
ಆಕಾಶ್ ಸಂಸ್ಥೆಯ ಉಪನಿರ್ದೇಶಕ ಸುಧೀರ್ ಕುಮಾರ್ ಅವರು ಹೇಳಿದರು.
ನಗರದ ಪಾರ್ವತಿನಗರದ ಸೌದಮನಿಯ ಕಾಂಪ್ಲೆಕ್ಸ್ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
ಪರೀಕ್ಷಾ ಸಿದ್ಧತಾ ಸೇವೆಗಳ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಆಕಾಶ ಬೈಜೂಸ್ 24 ರಾಜ್ಯಗಳಲ್ಲಿ 285 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ತರಬೇತಿ ನೀಡಲಾಗಿತ್ತಿದ್ದು, ವಾರ್ಷಿಕವಾಗಿ 3.33 ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿತ್ತಿದೆ.
ಬಳ್ಳಾರಿಯಲ್ಲಿನ ಆಕಾರ್ ಬೈಜೂಸ್ ಕ್ಲಾಸ್ ರೂಂ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ಎಂಜಿನಿಯರಿAಗ್ ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸಲು ತರಬೇತಿ ನೀಡಲಾಗುತ್ತಿದ್ದು, ಈ ಕೇಂದ್ರದಲ್ಲಿ 11 ಕ್ಲಾಸ್ ರೂಂಗಳಲ್ಲಿ 1200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿತ್ತಿದೆ. ಐದು ರಾಜ್ಯದಲ್ಲಿ 75 ಬ್ರಾಂಚ್‌ಗಳಿದ್ದು, ಕರ್ನಾಟಕದಲ್ಲಿ 25ನೇ ಬ್ರಾಂಚ್ ಬಳ್ಳಾರಿಯಲ್ಲಿ ಪ್ರಾರಂಭ ಮಾಡಲಾಗಿದೆ ಎಂದರು.
ವಿದ್ಯಾರ್ಥಿಗಳನ್ನು ವಿವಿಧ ಪರೀಕ್ಷೆಗಳಿಗೆ ವ್ಯಾಪಕವಾಗಿ ಮತ್ತು ಸಮಗ್ರವಾಗಿ ಸಿದ್ಧಪಡಿಸುತ್ತವೆ. ಇದಲ್ಲದೇ, ಅಳವಡಿಸಿಕೊಂಡ ಬೋಧನಾ ವಿಧಾನವು ಪರಿಕಲ್ಪನಾ ಮತ್ತು ಆಪ್ಲಿಕೇಶನ್-ಆಧಾರಿತ ಕಲಿಕೆಯ ಮೇಲೆ ಕೇಂದ್ರೀಕರಿಸುವ ಮೂಲಕ ಅದನ್ನು ಬ್ರಾಂಡ್ ಆಗಿ ಪ್ರತ್ಯೇಕಿಸುತ್ತದೆ. ಆಕಾಶ್‌ನಲ್ಲಿರುವ ಪರಿಣಿತ ಅಧ್ಯಾಪಕರು ವಿದ್ಯಾರ್ಥಿಗಳಿಗೆ ತಮ್ಮ ಗುರಿಗಳನ್ನು ಸಾಧಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ಆಧುನಿಕ ಮತ್ತು ಸಂವಾದಾತ್ಮಕ ಬೋಧನಾ ವಿಧಾನಗಳನ್ನು ಅನುಸರಿಸುತ್ತಾರೆ. ಆಕಾಶ್‌ನ ಸಾಬೀತಾದ ಯಶಸ್ಸಿನ ದಾಖಲೆಯು ಅದರ ವಿಶಿಷ್ಟ ಶಿಕ್ಷಣ ವಿತರಣಾ ವ್ಯವಸ್ಥೆಗೆ ಕಾರಣವಾಗಿದೆ. ಇದು ಕೇಂದ್ರೀಕೃತ ಮತ್ತು ಫಲಿತಾಂಶ ಆಧಾರಿತ ಬೋಧನಾ ವಿಧಾನಕ್ಕೆ ಒತ್ತು ನೀಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಿದ್ದಾರ್ಥ ಕೌಲ, ಬಾಲಾ ಶ್ರೀನಿವಾಸ್, ವಿಶ್ವನಾಥ್ ಪಿ.ಜಿ, ಗುರುವಿಂದ ಕೌಲ ಇದ್ದರು.