ಚಿತ್ರದುರ್ಗ: ರಾಷ್ಟಿçÃಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದಂತೆ, ಮೆಗಾ ಲೋಕ ಅದಾಲತನ್ನು ಆಗಸ್ಟ್ ೧೪ರಂದು ಎರಡನೇ ಶನಿವಾರದಂದು ನಡೆಸುವಂತೆ ನಿರ್ದೇಶನ ನೀಡಿರುತ್ತಾರೆ.
ಚಿತ್ರದುರ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಮಾತುಕತೆ ಮೂಲಕ ತೀರ್ಮಾನಿಸಲು ಪ್ರತಿ ದಿನ ಜನತಾ ನ್ಯಾಯಲಯ ನಡೆಸಲಾಗುತ್ತದೆ.
ಮೋಟಾರು ವಾಹನ ಅಪಘಾತ ಪರಿಹಾರ ಅರ್ಜಿ, ರಾಜಿಯಾಗತಕ್ಕಂತಹ ಕ್ರಿಮಿನಲ್ ಪ್ರಕರಣ, ಸಿವಿಲ್ ದಾವೆ, ನೆಗೋಷಿಯಬಲ್ ಇನ್ಟುçಮೆಂಟ್ ಕಾಯ್ದೆ ಅಡಿ ದಾಖಲಾದ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಕೆ.ಗಿರೀಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.