ಮುಂಬೈ: ಬಾಲಿವುಡ್‌ನ ಖ್ಯಾತ ನಟ ಅನುಪಮ್ ಖೇರ್ ಅವರಿಗೆ ಅಮೆರಿಕದ ಹಿಂದೂ ವಿಶ್ವವಿದ್ಯಾಲಯ, ಹಿಂದೂ ಅಧ್ಯಯನದ ವಿಷಯದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಫ್ಲೋರಿಡಾ ಮೂಲದ ವಿಶ್ವವಿದ್ಯಾನಿಲಯವು ಶನಿವಾರ ನ್ಯೂಯಾರ್ಕ್ ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಖೇರ್ ಅವರಿಗೆ ಹಿಂದು ಅಧ್ಯಯನದಲ್ಲಿ ಗೌರವ ಡಾಕ್ಟರ್ ಆಫ್ ಫಿಲಾಸಫಿ ಪದವಿ ನೀಡಿತು.
ಪದವಿ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅನುಪಮ್ ಖೇರ್, ಡಾಕ್ಟರೇಟ್ ಸ್ವೀಕರಿಸಲು ಸಂತಸವಾಗುತ್ತಿದೆ. ಇದು ನನ್ನ ಜೀವನದ ಪ್ರಮುಖ ಘಟನೆಗಳಲ್ಲಿ ಒಂದು. ಡಾಕ್ಟರೇಟ್ ನನಗೆ ಹಿಂದೂ ಧರ್ಮದ ತತ್ವಶಾಸ್ತ್ರ, ವಿಶ್ವದ ಅತ್ಯಂತ ಹಳೆಯ ಸಂಸ್ಕೃತಿಯ ತತ್ತ್ವಶಾಸ್ತ್ರದ ಬಗ್ಗೆ ಮಾತನಾಡಲು ವೇದಿಕೆ ನೀಡುತ್ತದೆ ಎಂದರು.
ಅಮೆರಿಕದಲ್ಲಿದ್ದಾಗ, ಖೇರ್ ತನ್ನ ಹೊಸ ಚಿತ್ರ ಪ್ರದರ್ಶನ ‘ಜಿಂದಗಿ ಕಾ ಸಫರ್’ ಪ್ರಚಾರಕ್ಕಾಗಿ ಹಲವಾರು ನಗರಗಳಿಗೆ ಪ್ರಯಾಣ ಬೆಳೆಸಿದರು, ಇದರಲ್ಲಿ ಅವರು ಪ್ರೇಕ್ಷಕರೊಂದಿಗೆ ಉತ್ಸಾಹಭರಿತ ಸಂವಹನ ನಡೆಸಿದರು.