ಹುಬ್ಬಳ್ಳಿ: 38 ನೇ ವಾರ್ಡ್ ವ್ಯಾಪ್ತಿಯ ವಾಯುಪುತ್ರ ಬಡಾವಣೆ, ಓಂ ನಗರ, ಸೇರಿದಂತೆ ಮುಂತಾದ ಕಡೆಗಳಲ್ಲಿ ಮನೆ ಮನೆಗೆ ತೆರಳಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಪ್ಪ ತಡಸದ ಮತದಾರರು ನನಗೆ ಆರ್ಶೀವಾದ ಮಾಡಿದರೆ 38 ನೇ ವಾರ್ಡಿನ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತೇನೆ. ಈ ಭಾಗದ ರಸ್ತೆ, ಬೀದಿ ದೀಪ, ನೀರಿನ ಸೌಕರ್ಯ, ಸ್ವಚ್ಛತೆಗೆ ಒತ್ತು ನೀಡುತ್ತೇನೆ. ಮತ್ತು ಸುಸಜ್ಜಿತವಾದ ಗ್ರಂಥಾಲಯ,ಶುದ್ದವಾದ ಗಾಳಿಯ ಸಿಗಲು ಗುಣಮಟ್ಟದ ಉದ್ಯಾನವನ ಮತ್ತು ಯುವಕರಿಗೆ ಆರೋಗ್ಯ ದೃಷ್ಠಿಯಿಂದ ವ್ಯಾಯಾಮ ಶಾಲೆ ವಾರ್ಡ್ ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಅಲ್ಲದೇ ಸರ್ಕಾರ ಹಾಗೂ ಮಹಾನಗರ ಪಾಲಿಕೆಯಿಂದ ಬರುವ ಎಲ್ಲ ಸೌಲಭ್ಯಗಳು ವಾರ್ಡ್ ಜನರಿಗೆ ಕಲ್ಪಿಸುವ ಶತಪ್ರಯತ್ನ ಮಾಡಿ ಹು-ಧಾ ಮಹಾನಗರದಲ್ಲೇ 38 ನೇ ವಾರ್ಡ್ನ್ನು ಮಾದರಿ ವಾರ್ಡ್ ಮಾಡುವ ಗುರಿ ಹೊಂದಿದ್ದೇನೆ ಎಂದರಲ್ಲದೆ ಆಮ್ ಆದ್ಮಿ ಪಕ್ಷಕ್ಕೆ ತಮ್ಮ ಅತ್ಯಮೂಲ್ಯವಾದ ಮತ ನೀಡಿ ಆರ್ಶೀವದಿಸುವಂತೆ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಸದಾನಂದ ಹೊಳಣ್ಣನವರ,.ವಿನಯ್ ಕರಮದಿ,ಗುರುರಾಜ ಕುಂಬಾರ,ಶೋಬಾ ಹೆಬ್ಬಾಳ,ಪ್ರತಿಭಾ ದಿವಾಕರ, ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.