ಮರಿಯಮ್ಮನಹಳ್ಳಿ:ಪಟ್ಟಣದಲ್ಲಿ ಎಲ್ಲೇ ಹಾವು ಕಂಡರೆ ಕ್ಷಣಾರ್ಧದಲ್ಲಿ ಉರಗ ಪ್ರೇಮಿ ಇಮಾಂಕಾಶೀಂ ಹಾಜರ್.ಹಾವು ಹಿಡಿಯುವಲ್ಲಿ ಸಿದ್ದ ಹಸ್ತರಾದ ಇವರು ಶುಕ್ರವಾರ ಪಟ್ಟಣದ ಸಮೀಪದ ಮ.ಮ.ಹಳ್ಳಿತಾಂಡದ ರಾಮನಾಯ್ಕ ಎನ್ನುವವರ ಮನೆ ಬಳಿ ಕಾಣಿಸಿಕೊಂಡ ಸುಮಾರು ಹತ್ತುಅಡಿ ಉದ್ದದ ಕೆರೆಹಾವು ಹಿಡಿದು ಕಾಡಿಗೆ ಬಿಟ್ಟರು.ಹಾವು ಎಂತಹದೆ ಜಾಗದಲ್ಲಿದ್ದರು ಅದನ್ನು ಎಚ್ಚರಿಕೆಯಿಂದ ಹಿಡಿದು ನಂತರ ಅಷ್ಟೇ ಜತನದಿಂದ ಅದನ್ನು ಪ್ಲಾಸ್ಟಿಕ್ ಡಬ್ಬದೊಳಗೆ ಹಿಡಿದಾಕಿ ಕಾಡಿಗೆ ಬಿಡುವ ಇವರು ಹಿಡಿದ ಹಾವನ್ನು ಎಂದೂ ಸಾಯಿಸಿಲ್ಲ.ಯಾರು ಯಾವುದೇ ವೇಳೆಯಲ್ಲಿ ಹಾವು ಕಾಣಿಸಿಕೊಂಡ ಕುರಿತು ಇವರಿಗೆ ಕರೆಮಾಡಿದರೆ ಹಿಂದೆ ಮುಂದೆ ಯೋಚಿಸದೆ ಅಲ್ಲಿ ಹಾಜರ್.ಕಳೆದ ಒಂದು ತಿಂಗಳಿಂದ ಸುಮಾರು ಹತ್ತಕ್ಕೂ ಹೆಚ್ಚಿನ ವಿವಿಧ ಜಾತಿಯ ಹಾವುಗಳನ್ನು ಹಿಡಿದು ರಕ್ಷಿಸಿ ಕಾಡಿಗೆ ಬಿಟ್ಟಿದ್ದೇನೆಂದರು.ಹಾವು ಹಿಡಿದು ಕಾಡಿಗೆ ಬಿಡುತ್ತೇನೆ.ಯಾವುದೇ ನಿರೀಕ್ಷೆಗಳಿಲ್ಲ ನಮಗೆ ಎಂದರು.ಇವರ ಸಂಪರ್ಕ ಸಂಖ್ಯೆ 8748860976.